Site icon PowerTV

ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬವನ್ನ ಒಗ್ಗಟ್ಟಿನಿಂದ ಆಚರಿಸಲಾಗುತ್ತದೆ : ಎಂ.ಬಿ ಪಾಟೀಲ್

ಬೆಂಗಳೂರು : ಸಿದ್ದರಾಮಯ್ಯರ ೭೫ನೇ ಹುಟ್ಟುಹಬ್ಬವನ್ನ ಎಲ್ಲರೂ ಒಗ್ಗಟ್ಟಿನಿಂದ ಆಚರಿಸಲಾಗುತ್ತಿದ್ದೇವೆ. ರಾಹುಲ್ ಗಾಂಧಿ ಕೂಡ ಭಾಗವಹಿಸುತ್ತಿದ್ದಾರೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ಪೂರ್ವಭಾವಿ ಸಭೆಗೆ ಭಾಗಿಯಾಗಬೇಕಾದ ಅಗತ್ಯ ಇರಲಿಲ್ಲ. ಈಗಾಗಲೇ ಅವರು ಕಾರ್ಯಕ್ರಕ್ಕೆ ಅತಿಥಿಯಾಗಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಆಗಿದೆ. ಕಾಂಗ್ರೆಸ್ ಪಕ್ಷ ಪೂರ್ತಿಯಾಗಿ ಇದರಲ್ಲಿ ಭಾಗಿಯಾಗುತ್ತೆ. ಇದು ಕಾಂಗ್ರೆಸ್ ಕಾರ್ಯಕ್ರಮ. ವ್ಯಕ್ತಿ ಪೂಜೆ ಮಾಡುತ್ತಿಲ್ಲ, ಸಿದ್ದರಾಮಯ್ಯ ಹುಟ್ಟುಹಬ್ಬ. ಇಲ್ಲಿ ಮದುಮಗ ಅಂದ್ರೆ ಸಿದ್ದರಾಮಯ್ಯ. ಹಾಗಾಗಿ ಕಾರ್ಯಕ್ರಮದಲ್ಲಿ ಮುಖ್ಯವಾಗಿರ್ತಾರೆ ಎಂದರು.

ಇನ್ನು, ಡಿ ಕೆ ಶಿವಕುಮಾರ್ ಕೂಡ ೭೫ ವರ್ಷಕ್ಕೆ ಕಾರ್ಯಕ್ರಮ ‌ಮಾಡಲಿ, ನನಗೂ ೭೫ ವರ್ಷ ಆದಾಗ ಕಾರ್ಯಕ್ರಮ ಮಾಡೋಣ. ಈಗ ಅರವತ್ತು ವರ್ಷ ತುಂಬಿದೆ, ಷಷ್ಠಿಪೂರ್ತಿ ಮಾಡಿಕೊಳ್ಳಲಿ. ನಾವೆಲ್ಲ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಇದರಲ್ಲಿ ಯಾವುದೇ ಕಾರ್ಯಕ್ರಮ ತಪ್ಪಿಲ್ಲ ಎಂದು ಹೇಳಿದರು.

Exit mobile version