Site icon PowerTV

ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಅರ್ಚಕ

ರಾಯಚೂರು: ತುಂಗಭದ್ರಾ ನದಿ ನೀರಲ್ಲಿ ಸ್ನಾನ ಮಾಡಲು ಹೋದ ದೇವಸ್ಥಾನದ ಅರ್ಚಕರೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ಸಂಭವಿಸಿದೆ.

ಲಿಂಗಪ್ಪ (56) ತುಂಗಭದ್ರ ನದಿ ನೀರು ಪಾಲಾದ ಅರ್ಚಕ. ಗ್ರಾಮದ ಕರಿವಿರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಲಿಂಗಪ್ಪ ಎಂದಿನಂತೆ ನದಿ ನೀರಲ್ಲಿ ಸ್ನಾನ ಮಾಡಲು ಬೆಳಗ್ಗೆ ತೆರಳಿದ್ದರು. ಎಷ್ಟೊತ್ತಾದರೂ ಬಾರದಿದ್ದಾಗ ಅನುಮಾನಗೊಂಡು ಕುಟುಂಬಸ್ಥರು ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು ಕುಟುಂಬಸ್ಥರಲ್ಲಿ ಆತಂಕ ಮಡುಗಟ್ಟಿದೆ. ಸ್ನಾನ ಮಾಡೋಕು ಮುನ್ನ ನದಿ ತೀರದಲ್ಲಿ ಬಿಟ್ಟಿದ್ದ ಪಾದರಕ್ಷೆಗಳು ಅಲ್ಲೇ ಇವೆ. ಮುಂಗಾರು ಮಳೆ ಜೋರಾಗಿದ್ದು ಒಳ ಹರಿವು-ಒಳ ಹರಿವು ಹೆಚ್ಚಾಗಿದೆ. ಪ್ರವಾಹ ಭೀತಿ ಎದುರಾಗಿದೆ. ಸ್ನಾನ ಮಾಡುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಸದ್ಯ ಸ್ಥಳಕ್ಕೆ ಎನ್​ಡಿಆರ್​ಎಫ್​ ತಂಡ ಆಗಮಿಸಿದ್ದು ಲಿಂಗಪ್ಪರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

Exit mobile version