Site icon PowerTV

ವ್ಯಕ್ತಿ ಪೂಜೆ ಬೇಡ,‌ ಪಕ್ಷ‌ಪೂಜೆ‌ ಮಾಡಿ : ಡಿ.ಕೆ ಶಿವಕುಮಾರ್

ಬೆಂಗಳೂರು : ನನಗೆ ಯಾವ ಉತ್ಸವವೂ ಬೇಡ ಎಂದು ಸದಾಶಿವನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ಉತ್ಸವವೂ ಬೇಡ. ನನ್ನ ಹುಟ್ಟು ಹಬ್ಬಕ್ಕೆ ಅನೇಕ‌ ಅಭಿಮಾನಿಗಳು ಜಾಹೀರಾತು ಕೊಡ್ತೇವೆ ಅಂದ್ರು. ನಾನೇ‌ ಬೇಡ ಅಂತಾ ಹೇಳಿದ್ದೇನೆ. ಬೇರೆಯವರಿಗೆ ತೊಂದರೆ ಬೇಡ ಅಂತಾ‌ ಕುಟುಂಬದ ಜೊತೆ ಕೇದಾರನಾಥಗೆ‌ ಹೋಗಿದ್ದೆವು ಎಂದರು.

ರಾಜು ಬರೆದ ಪತ್ರ ಅವರ ವೈಯಕ್ತಿಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಅಧಿಕಾರ ಸ್ವೀಕರಿಸುವಾಗಲೇ‌ ಹೇಳಿದ್ದೇನೆ. ವ್ಯಕ್ತಿ ಪೂಜೆ ಬೇಡ,‌ ಪಕ್ಷ‌ಪೂಜೆ‌ ಮಾಡಿ ಅಂತಾ, ಇವತ್ತು ಅದನ್ನೇ‌‌ ಹೇಳ್ತೇನೆ ನನಗೆ ಪಾರ್ಟಿ ಉತ್ಸವ ಬೇಕು ಎಂದು ಹೇಳಿದರು.

Exit mobile version