Site icon PowerTV

ಸಾವಿನಲ್ಲೂ ಒಂದಾದ ವೃದ್ಧ ದಂಪತಿಗಳು

ಹಾವೇರಿ : ಪತಿ ತೀರಿಹೋದ ಅಂತಾ ಕುಸಿದು ಬಿದ್ದು ಪತ್ನಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ.

ಬಸಪ್ಪ ಕಂಬಳಿ 87,ದ್ಯಾಮವ್ವ ಬಸಪ್ಪ ಕಂಬಳಿ 82,ಸಾವನ್ನಪ್ಪಿದ ವೃದ್ಧ ದಂಪತಿಗಳು. 4 ಜನ ಮಕ್ಕಳು,11 ಜನ ಮೊಮ್ಮಕ್ಕಳನ್ನು ಅಗಲಿರುವ ಮೃತ ವೃದ್ಧ ದಂಪತಿಗಳು. ಹೆಂಡತಿ ಮೇಲೆ ಬಹಳ ಪ್ರೀತಿ ಇಟ್ಟುಕೊಂಡಿದ್ದ ತೀವ್ರ ಅನಾರೋಗ್ಯದಿಂದ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.

ಇನ್ನು, ಈ ಸುದ್ದಿ ತಿಳಿದ ಪತ್ನಿ ದ್ಯಾಮವ್ವ ನಸುಕಿನ ಜಾವ ಮನೆಯಲ್ಲಿ ಸಾವನ್ನಪ್ಪಿದ್ದು, 55 ವರ್ಷದ ದಾಂಪತ್ಯದಲ್ಲಿ ಒಂದು ದಿನವೂ ಬಿಟ್ಟಿರಲಾರದ ದಂಪತಿಗಳು. ಅಕಾಲಿಕ ಸಾವಿಗೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈಗ ಸಾವಿನಲ್ಲೂ ಒಂದಾದ ವೃದ್ಧ ದಂಪತಿಗಳ ಸಾವಿಗೆ ಮಮ್ಮಲು ಮರುಗಿದ ಗ್ರಾಮಸ್ಥರು. ಇಂದು ಒಂದೆ ಸ್ಥಳದಲ್ಲಿ ಇಬ್ಬರ ಅಂತ್ಯಕ್ರಿಯೆಯನ್ನು ಸಂಬಂಧಿಕರು ಮಾಡಲಿದ್ದಾರೆ.

Exit mobile version