Site icon PowerTV

ಭಜರಂಗ ದಳ ಕಾರ್ಯಕರ್ತನ ಮೇಲೆ ಹಲ್ಲೆ

ಶಿವಮೊಗ್ಗ : ನಗರದ ಭಜರಂಗ ದಳ ಕಾರ್ಯಕರ್ತ, ಬಿಜೆಪಿ ಮುಖಂಡ ಕಾಂತರಾಜು ಮೇಲೆ ಹಲ್ಲೆ ನಡೆದಿದ್ದು, ಗಾಯಾಳನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ರಾತ್ರಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಕಾಂತರಾಜು ಮೂತ್ರ ವಿಸರ್ಜನೆಗೆಂದು ಹೋದಾಗ ಅನ್ಯಕೋಮಿನ ಹುಡುಗರು ದಾಳಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಸ್ನೇಹಿತರು, ಕುಟುಂಬಸ್ಥರು ಬಂದ ಹಿನ್ನೆಲೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ಕಾಂತರಾಜುವಿನ ಬಲಗೈಗೆ ಗಂಭೀರ ಗಾಯವಾಗಿದೆ.

ಹಲ್ಲೆಗೊಳಗಾದ ಕಾಂತರಾಜು ನಿನ್ನೆ ಮಥುರಾ ಪ್ಯಾರಡೈಸ್ ಬಳಿ ಯುವತಿಯರಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆನಡೆದಿದೆ. ನಿನ್ನೆ ರಾಜೀವ್ ಗಾಂಧಿ ಬಡಾವಣೆಯಲ್ಲಿ ಎರಡೂ ಕೋಮಿನಿಂದ ಕಲ್ಲು ತೂರಾಟವಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ದಾಳಿ ನಡೆಸಿರುವ ಸಾಧ್ಯತೆಯಿದೆ.

Exit mobile version