Site icon PowerTV

ತುಂಗಭದ್ರಾ ಜಲಾಶಯ ತುಂಬಲು 12 ಟಿಎಂಸಿ ಬಾಕಿ

ವಿಜಯನಗರ : ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ತುಂಬಲು ಇನ್ನು 12 ಟಿಎಂಸಿ ಮಾತ್ರ ಇದೆ.

ಜಲಾಶಯ ತುಂಬಲು ಇನ್ನು 12 ಟಿಎಂಸಿ ಬಾಕಿ ಇದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟ 1633 ಅಡಿ. ಇಂದು ಸಂಗ್ರಹವಾದ ನೀರಿನ‌ಮಟ್ಟ 1628.45 ಅಡಿ ಹೆಚ್ಚಳವಾಗಿದೆ. ಜಲಾಶಯದ ಒಳಹರಿವು 70831 ಕ್ಯೂಸೆಕ್, ಹೊರಹರಿವು 319 ಕ್ಯೂಸೆಕ್ ಇದೆ.

ಇನ್ನು, 105.788 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರೋ ತುಂಗಭದ್ರಾ ಜಲಾಶಯ ಸದ್ಯ 88.358 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ತುಂಬಿದ ತಕ್ಷಣ ನದಿಗೆ ನೀರು ಹರಿಸಲಾಗುತ್ತದೆ. ನದಿ ಪಾತ್ರದ ಜನರ ಬಗ್ಗೆ ಎಚ್ಚರಿಕೆ ವಹಿಸಲು ಟಿಬಿ ಬೋರ್ಡ್ ನಿಂದ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

Exit mobile version