Site icon PowerTV

ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಶಿವಮೊಗ್ಗ : ಮಲೆನಾಡಿನ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಗಳಲ್ಲಿ, ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಜುಲೈ 11 ರಿಂದ ಜುಲೈ 15 ರವರೆಗೆ ಧಾರಾಕಾರ ವರ್ಷಧಾರೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಮಳೆ ಎಚ್ಚರಿಕೆ ಸಂದೇಶದಲ್ಲಿ ತಿಳಿಸಿದೆ.

ಮಂಗಳವಾರ ವರ್ಷಧಾರೆಯ ಅಬ್ಬರ ಹೆಚ್ಚಿರಲಿದೆ. 115 ಮಿಲಿ ಮೀಟರ್ ನಿಂದ 204 ಮಿ.ಮೀ. ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ತದನಂತರ ಅಬ್ಬರ ಕಡಿಮೆಯಾಗಲಿದ್ದು, ಜು. 13 ರಿಂದ 15 ರವರೆಗೆ 64 ಮಿಲ. ಮೀ. ನಿಂದ 115 ಮಿ. ಮೀ. ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

Exit mobile version