Site icon PowerTV

ಬೆಳಗಾವಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆಯ ಅಬ್ಬರ

ಬೆಳಗಾವಿ : ನಿರಂತರ ಮಳೆಗೆ 20ಕ್ಕೂ ಅಧಿಕ ಮನೆಗಳು, ಒಂದು ಶಾಲಾ ಕೊಠಡಿಗೆ ಹಾನಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಜಿಲ್ಲೆಯಾದ್ಯಂತ ಮುಂದುವರೆದ ಮಳೆಯ ಅಬ್ಬರದಿಂದಾಗಿ 20ಕ್ಕೂ ಅಧಿಕ ಮನೆಗಳು, ಒಂದು ಶಾಲಾ ಕೊಠಡಿಗೆ ಹಾನಿಗೊಳಗಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಹಲವೆಡೆ ಮನೆಗಳ ಗೋಡೆ ಕುಸಿತ ಉಂಟಾಗಿದ್ದು, ಕಿತ್ತೂರು ತಾಲೂಕಿನಲ್ಲಿ ಧಾರಾಕಾರ ಮಳೆಗೆ 20 ಮನೆಗಳಿಗೆ ಹಾನಿಯಾಗಿದೆ.

ಇನ್ನು, ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ, ಚಿಕ್ಕನಂದಿಹಳ್ಳಿ, ತಿಗಡೊಳ್ಳಿ, ಬೈಲೂರು ಗ್ರಾಮಗಳಲ್ಲಿ ಮನೆ ಗೋಟೆಗಳೂ ಕುಸಿತಗೊಂಡಿದೆ. ಹೀಗಾಗಿ ಸಂತ್ರಸ್ತರು ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಅದಲ್ಲದೇ, ಖಾನಾಪುರ ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿ ಕುಸಿತಗೊಂಡಿದೆ. ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿಯನ್ನು ಎರಡು ವರ್ಷದಿಂದ ಬಳಸುತ್ತಿರಲಿಲ್ಲ. ಸ್ಥಳಕ್ಕೆ ಖಾನಾಪುರ ತಾಲೂಕು ಶಿಕ್ಷಣ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version