Site icon PowerTV

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಯಮಗುಂಡಿಗಳ ಹಾವಳಿ

ಬೆಂಗಳೂರು : ಬೆಂಗಳೂರಿನಲ್ಲಿ ಗುಂಡಿ ಗಂಡಾಂತರಗಳಿಗೆ ಫುಲ್ ಸ್ಟಾಪ್ ಯಾವಾಗ..? ಹೈಕೋರ್ಟ್ ಚೀಮಾರಿ ಹಾಕಿದ್ರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ನಗರದಲ್ಲಿ ಯಮಗುಂಡಿಗಳ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಹೈಕೋರ್ಟ್ ಚೀಮಾರಿ ಹಾಕಿದ್ರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಬಂಡೆಮಠ ಬಡಾವಣೆಯ ಗಲ್ಲಿ ಗಲ್ಲಿಯಲ್ಲಿ ರಸ್ತೆ ಗುಂಡಿಗಳ ದರ್ಶನ ಕಂಡುಬರುತ್ತಿದೆ.

ಇನ್ನು, ಕೊಮ್ಮಘಟ್ಟ ರಸ್ತೆಯಿಂದ ಕೆಎಚ್ ಬಿ ಬಡಾವಣೆಗೆ ಹೋಗುವ ಮುನ್ನ ಎಚ್ಚರ. ಅಮಾಯಕರ ಬಲಿಗಾಗಿ ಆಳೆತ್ತರದ ಗುಂಡಿ ಬಾಯ್ದೆರೆದಿದೆ. ಕಂಪ್ಲೇಂಟ್ ಮಾಡಿ 10 ದಿನ ಕಳೆದ್ರೂ ಗುಂಡಿ ಮುಚ್ಚದ ಪಾಲಿಕೆ ಸ್ಥಳೀಯ ಬಿಬಿಎಂಪಿ ಇಇಗೆ ಹೇಳಿದ್ರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

Exit mobile version