Site icon PowerTV

ನಾವು ಬಾಂಬ್ ಹಿಡಿದು ಬಂದಿಲ್ಲ : ಬಡಗಲಪುರ ನಾಗೇಂದ್ರ

ಬೆಂಗಳೂರು : ಹಸಿರು ಶಾಲು ಹಾಕಿಕೊಂಡು ಶಾಂತಿ ಯುತವಾಗಿ ಬಂದಿದ್ದೇವೆ ನಾವು ಬಾಂಬ್ ಹಿಡಿದು ಬಂದಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಖ್ಯ ಮಂತ್ರಿಜೊತೆಗೆ ಮಾತನಾಡಲು ಬಂದಿದ್ದು. ಆದ್ರೆ ಬಂಧಿಸಲು ಮುಂದಾಗಿದ್ದಾರೆ. ನಾವು ಸುಮ್ಮನೆ ಇರೋದಿಲ್ಲ. ನಾವು ಕಬಿನಿ, ಕಾವೇರಿಗೆ ಸಿಎಂ ಬಾಗಿನ ಅರ್ಪಿಸಲು ಬಂದಾಗ ನಮ್ಮ ಹೆಣ್ಣುಮಕ್ಕಳು ಕಪ್ಪುಬಾವುಟ ಪ್ರದರ್ಶನ ಮಾಡಿ ಸ್ವಾಗತಿಸ್ತಿವಿ ಎಂದರು.

ಇನ್ನು, ಸಿಎಂ ಮನೆಗೆ ಭೇಟಿಗೆ ಅವಕಾಶ ಇಲ್ಲದಿದ್ರೆ ಸಿಎಂನೇ ಇಲ್ಲಿಗೆ ಕರೆಸಿ. ಆದ್ರೆ ರೈತರ ಮೇಲೆ ಕೈ ಹಾಕೋ ಕೆಲಸ ಮಾಡಿದ್ದಾರೆ. ಇದು ಸರ್ಕಾರ ಪತನದ ಮುನ್ಸೂಚನೆ. ನಾವು ಗುಂಡೂರಾವ್ ಸರ್ಕಾರವನ್ನೇ ಬಿಟ್ಟಿಲ್ಲ ಈ ಸರ್ಕಾರವನ್ನೂ ಬಿಡೋದಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

Exit mobile version