Site icon PowerTV

ಪೂಜೆಗೆಂದು ತೆರಳಿದ್ದ ವೃದ್ದೆ ಶವವಾಗಿ ಪತ್ತೆ

ಶಿವಮೊಗ್ಗ: ಚೌಡೇಶ್ವರಿ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದ ವೃದ್ದೆ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದಲ್ಲಿ ನಡೆದಿದೆ.

ನಾಗರತ್ನ (64) ಮೃತ ದುರ್ದೈವಿ. ನಿನ್ನೆ ದೇವಸ್ಥಾನದ ಪೂಜೆಗೆಂದು ಬಂದಿದ್ದ ಅಜ್ಜಿ ಬಂದಿದ್ದರು. ಆದರೆ, ಇಂದು ಶವವಾಗಿ ಪತ್ತೆಯಾಗಿದ್ದಾರೆ.

ಪೂಜೆಗೆ ತೆಗೆದುಕೊಂಡು ಹೋಗಿದ್ದ ಹಣ್ಣುಕಾಯಿ ಬುಟ್ಟಿ ಹಾಗು ವೃದ್ದೆಯ ಶಾಲು ನದಿ ದಡದಲ್ಲಿ ಪತ್ತೆಯಾಗಿತ್ತು. ಈ ವೇಳೆ ವೃದ್ದೆ ಕುಮುದ್ವತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂಬ ಎಂಬ ಶಂಕೆ ಉಂಟಾಗಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬ್ಭಂದಿಯವರನ್ನು ಕರೆಸಿ ಹುಡುಕಾಟ ನಡೆಸಿದ್ದರು,ವೃದ್ದೆಯ ಶೋಧ ಕಾರ್ಯ ಯಶ್ವಸಿಯಾಗಿದ್ದು ಚೋರಡಿ ಸಮೀಪದ ಕುಮದ್ವತಿ ನದಿಯಲ್ಲಿ ವೃದ್ದೆಯ ಶವ ಪತ್ತೆಯಾಗಿದೆ.

ಸದ್ಯ ಘಟನೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.

Exit mobile version