Site icon PowerTV

ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ಉಡುಪಿ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮುಂಗಾರು ಆರ್ಭಟ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಮತ್ತೆರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.

ನದಿಗಳು ತುಂಬಿ ಹರಿಯುತ್ತಿದ್ದು ತೋಟ ಗದ್ದೆ ಮನೆಗಳು ಜಲಾವೃತ ಆಗಿದೆ. ಬ್ರಹ್ಮಾವರದಲ್ಲಿ ಸೀತಾ ನದಿ ತುಂಬಿ ಹರಿಯುತ್ತಿದ್ದು ಸುತ್ತಮುತ್ತಲ ಜಮೀನುಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದೆ. ಕಿಂಡಿ ಅಣೆಕಟ್ಟು ನದಿ ಸುತ್ತಮುತ್ತಲ ಜಮೀನಿನಲ್ಲಿ ನೆರೆನೀರು ತುಂಬಿಕೊಂಡಿರುವ ದೃಶ್ಯಾವಳಿ ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದ್ದು ಸ್ಥಳೀಯ ನಿವಾಸಿ ರಕ್ಷಿತ್ ನಾಯಕ್ ಇದನ್ನು ಸೆರೆಹಿಡಿದಿದ್ದಾರೆ.

Exit mobile version