Site icon PowerTV

1.05 ಲಕ್ಷ ರೂಗೆ ಬಂಡೂರು ಟಗರು ಸೇಲ್

ಮಂಡ್ಯ: ಬಕ್ರೀದ್ ಹಬ್ಬ ಹಿನ್ನಲೆ ದುಬಾರಿ ಬೆಲೆಗೆ ಟಗರು ಸೇಲ್ ಮಾಡಿದ ಘಟನೆ ಮಂಡ್ಯದ ಕ್ಯಾಂತುಗೆರೆ ಗ್ರಾಮದಲ್ಲಿ ನಡೆದಿದೆ.

ಸುಮಾರು 1.05 ಲಕ್ಷ ರೂಗಳಿಗೆ ಜೋಡಿ ಟಗರು ಮಾರಾಟವಾಗಿದ್ದು, ಗ್ರಾಮದ ಶರತ್ ಬಂಡೂರು ತಳಿಯ ಟಗರು ಸಾಕಿದ್ದ ರೈತ ಒಂದುವರೇ ವರ್ಷದಿಂದ ಜೋಡಿ ಟಗರು ಸಾಕಿದ್ದ ರೈತ. ದುಬಾರಿ ಬೆಲೆ ಕೊಟ್ಟು ಜೋಡಿ ಟಗರನ್ನು ಮಂಡ್ಯ ನಗರದ ಮುಬಾರಕ್ ಬಾಬ ಖರೀದಿಸಿದ್ದಾರೆ.

ಬಂಡೂರು ಟಗರು ಸಾಕಿದ ಮಾಲೀಕನನ್ನು ಅಭಿನಂದಿಸಿದ ಮುಬಾರಕ್. ಗ್ರಾಮದಲ್ಲಿ ಅದ್ದೂರಿಯಾಗಿ ಟಗರನ್ನು ಬಿಕ್ಕೊಟ್ಟಿದ್ದಾರೆ. ಕಳೆದ ವರ್ಷ ಸೂನಗಹಳ್ಳಿಯಲ್ಲಿ ಕೂಡ 1.25 ಲಕ್ಷಕ್ಕೆ ಎರಡೂ ಕುರಿ ಸೇಲ್ ಆಗಿದ್ದವು. ಬಂಡೂರು ತಳಿಯ ಕುರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ರೈತ ಖುಷಿಪಟ್ಟಿದ್ದಾರೆ.

Exit mobile version