Site icon PowerTV

ಸಂಪೂರ್ಣ ಭರ್ತಿಯಾಗಿದ್ದ ತುಂಗಾ ಜಲಾಶಯ

ಶಿವಮೊಗ್ಗ : ನಗರಕ್ಕೆ ತುಂಗಾ ನದಿ ಪ್ರವಾಹ ಆತಂಕ ದೂರವಾಗಿದ್ದು, ಒಳಹರಿವಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ಹೊರಕ್ಕೆ ಬಿಡಲಾಗಿದೆ.

ಕಳೆದೊಂದು ವಾರದಿಂದ ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಿತ್ತು. ಜಲಾಶಯಕ್ಕೆ 54,065 ಕ್ಯೂಸೆಕ್ ನೀರು ಒಳಹರಿವು ಇದ್ದು, 55,770 ಕ್ಯೂಸೆಕ್ ನೀರು ಜಲಾಶಯದಿಂದ ಹೊರಕ್ಕೆ ಬಿಡಲಾಗಿದೆ. ಜಲಾಶಯದಲ್ಲಿ ನೀರು ಸಂಗ್ರಹಕ್ಕೆ ಅವಕಾಶವನ್ನು ನೀಡಲಾಗಿದೆ.

ತುಂಗಾ ಜಲಾಶಯದ ನೀರು ಸಂಗ್ರಹದ ಗರಿಷ್ಠ ಮಟ್ಟ 588.24 ಮೀಟರ್ ಆಗಿದೆ. ಸದ್ಯದ ನೀರಿನ ಮಟ್ಟ 586.51 ಮೀಟರ್ ಆಗಿದ್ದು, ಇನ್ನೂ ಎರಡು ದಿನ ಸತತ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ವ್ಯಾಪಕ ಮಳೆಯಾದರೂ ಆತಂಕವಿಲ್ಲ.

Exit mobile version