Site icon PowerTV

ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಾಗಿದೆ ಹಾವುಗಳ ಹಾವಳಿ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಹಾವುಗಳ ಹಾವಳಿ ಹೆಚ್ಚಾದರಿಂದ ಬಿಬಿಎಂಪಿಯಿಂದ ಬೆಂಗಳೂರಿನ ಸಾರ್ವಜನಿಕರಲ್ಲಿ ಎಚ್ಚರದಿಂದರಲು ಸೂಚನೆಯನ್ನು ನೀಡಿದ್ದಾರೆ.

ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಾವುಗಳ ಹ್ಯಾಚಿಂಗ್ ಟೈಮ್ ಆಗಿದ್ದು, ಈ ಸಮಯದಲ್ಲಿ ಮೊಟ್ಟೆ ಒಡೆದು ಆಚೆ ಬರುವ ಹಾವಿನ ಮರಿಗಳು, ಈ ವೇಳೆ ಮಳೆ, ಚಳಿ ಇರುವುದರಿಂದ ಬೆಚ್ಚಗಿನ ಜಾಗ ಹುಡುಕಿಕೊಂಡು ಹೋಗುತ್ತೆ. ಹೀಗಾಗಿ ಮನೆಯಲ್ಲಿರುವ ಎಲ್ಲಾ ಜಾಗಗಳನ್ನು ಪ್ರತಿದಿನ ಕ್ಲೀನ್ ಮಾಡಿಡಲು ಪಾಲಿಕೆ ಮನವಿ ಮಾಡಿದ್ದಾರೆ.

ಇನ್ನು, ಮಳೆಗಾಲದ ಚಳಿಗೆ ಹಾವುಗಳ ಓಡಾಟ ಹೆಚ್ಚಾಗಿದ್ದು, ಪ್ರತಿದಿನ ನಗರದಲ್ಲಿ 50ಕ್ಕೂ ಹೆಚ್ಚಿನ ವಿಷಕಾರಿ ಹಾವುಗಳು ಸೆರೆಯಾಗ್ತಿದೆ. ಬಿಬಿಎಂಪಿಯಿಂದ ಎಲ್ಲಾ ಕಡೆ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬಿಬಿಎಂಪಿ ಅರಣ್ಯ ವಿಭಾಗದ ರೆಸ್ಕ್ಯೂ ಟೀಂ ಸಿಬ್ಬಂದಿಗಳು ಫುಲ್ ಅಲರ್ಟ್ ಆಗಿದ್ದಾರೆ. ನಿದ್ದೆ ಬಿಟ್ಟು ರಾಜಧಾನಿ ತುಂಬಾ ಓಡಾಡುತ್ತಿರುವ ಬಿಬಿಎಂಪಿ ರೆಸ್ಕ್ಯೂ ಟೀಂ ಆದಷ್ಟು ಎಚ್ಚರಿಕೆಯಿಂದ ಇರಲು‌ ಬಿಬಿಎಂಪಿ ರೆಸ್ಕ್ಯೂ ಟೀಮ್‌ ಮನವಿ ಮಾಡಿದ್ದಾರೆ.

Exit mobile version