Site icon PowerTV

ತುಮಕೂರಿನಲ್ಲಿ ಬಡ ಮಕ್ಕಳ ಬಗ್ಗೆ ಹೇಳೋರಿಲ್ಲ, ಕೇಳೊರಿಲ್ಲ..!

ತುಮಕೂರು : ಸರ್ಕಾರಿ ಶಾಲೆ ಅಭಿವೃದ್ಧಿ ಇಲ್ಲದೇ ಮರದಡಿ ವಿದ್ಯಾಭ್ಯಾಸ ಮಾಡುತ್ತಿದ್ದ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ತೊರೆಮಾವಿನಹಳ್ಳಿಯಲ್ಲಿ ನಡೆದಿದೆ.

ಶಿಕ್ಷಣ‌ ಸಚಿವರ ಜಿಲ್ಲೆಯಲ್ಲೇ ಮಕ್ಕಳಿಗೆ ಬೀದಿಯಲ್ಲಿ ಪಾಠ ಮಾಡುತ್ತಿದ್ದು, ಮಳೆ ಬಂದ್ರೆ ಕೊಠಡಿ ಒಳಗೆ ನೀರು ತೊಟ್ಟಿಕುವ ಪರಿಸ್ಥಿತಿ ಉಂಟಾಗಿದ್ದು, ಹೆಂಚುಗಳು ಒಡೆದು, ತೀರು ಮುರಿದು ಬೀಳುವಂತಿರುವ ದುಸ್ಥಿತಿಯಲ್ಲಿದೆ.

ಇನ್ನು ಪ್ರತಿನಿತ್ಯ ಜೀವ ಭಯದಿಂದ ವಿದ್ಯಾಭ್ಯಾಸ ಮಾಡ್ತಿರೋ ವಿದ್ಯಾರ್ಥಿಗಳು, ಮಳೆಯಿಂದಾಗಿ ಮರದಡಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಗ್ರಾಮಸ್ಥರು ಹಲವು ಭಾರಿ ಮನವಿ ಕೊಟ್ರೂ ಸ್ಪಂದಿಸದ ಅಧಿಕಾರಿಗಳು, ಶಿಕ್ಷಣ ಸಚಿವರ ಸ್ವಜಿಲ್ಲೆಯ ಶಾಲೆಗಳಿಗೆ ಅಭಿವೃದ್ಧಿ ಕಾರ್ಯಕಲ್ಪ ಬೇಕಿದೆ.

Exit mobile version