Site icon PowerTV

ಕೋಡಿಹಳ್ಳಿ ಚಂದ್ರಶೇಖರಗೆ ಮತ್ತೊಂದು ಶಾಕ್

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಗೇಟ್​​ ಪಾಸ್​ ಮಾಡಿದ್ದಾರೆ.

ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷರಾಗಿ ಆಗಿದ್ದ ಕೋಡಿಹಳ್ಳಿಯನ್ನ ಕೂಟದಿಂದ ವಜಾ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ. ದಾವಣಗೆರೆ ತ್ರಿಶೂಲ್ ಕಲಾ ಭವನದಲ್ಲಿ ನಡೆಯುವ ಸಮ್ಮೇಳನದಲ್ಲಿ ಕೋಡಿಹಳ್ಳಿ ಚಂದ್ರಶೇಖರ್​​​ಗೆ ಅವಕಾಶ ಇಲ್ಲ ಎಂದರು.

ಇನ್ನು, ಗೌರವಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿಯನ್ನ ಕೈಬಿಟ್ಟಿರುವ ಕಾರಣ ಇನ್ನೂ ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಭಾಗವಹಿಸುವಂತಿಲ್ಲ. ಕೂಟ ಪದಾಧಿಕಾರಿಗಳಿಂದ ಅಂತಿಮ ನಿರ್ಣಯ ಮಾಡಿದ್ದು, ಸಾರಿಗೆ ನೌಕರರ ಮುಷ್ಕರ ನಿಲ್ಲಿಸಿಸಲು 35 ಕೋಟಿ ಡೀಲ್ ಮಾಡಿದ ಹಿನ್ನಲೆಯಲ್ಲಿ ಸಾರಿಗೆ ನೌಕರರ ಕೂಟದಿಂದ ಕೋಡಿಹಳ್ಳಿಯನ್ನು ಗೇಟ್​​ ಪಾಸ್​ ಮಾಡಿದ್ದಾರೆ.

Exit mobile version