Site icon PowerTV

ಅಮರನಾಥ ಯಾತ್ರೆಯಲ್ಲಿ ಸಿಲುಕಿ ಕನ್ನಡಿಗರ ಪರದಾಟ

ಶ್ರೀನಗರ : ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿನ ಪ್ರಸಿದ್ಧ ಯಾತ್ರಾ ತಾಣ ಅಮರನಾಥ ಗುಹೆ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಮೇಘ ಸ್ಪೋಟದಲ್ಲಿ 13 ಯಾತ್ರಿಗಳು ಸಾವನ್ನಪ್ಪಿದ್ದಾರೆ.

ಮೇಘಸ್ಫೋಟದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಭೀಕರ ಪ್ರವಾಹದಲ್ಲಿ 40ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ಅಮರನಾಥ ಯಾತ್ರೆಯಲ್ಲಿ ಸಿಲುಕಿ ಕನ್ನಡಿಗರು ಪರದಾಟ ಮಾಡುತ್ತಿದ್ದಾರೆ. ಅಮರನಾಥ್ ಗುಹೆ ಬಳಿಯೇ ಸಂಭವಿಸಿದ್ದ ಮೇಘಸ್ಫೋಟ ಸಂಭವಿಸಿದ್ದು, ದಿಢೀರ್‌ ಜಲಪ್ರಳಯದಿಂದ ಭಕ್ತರು ತತ್ತರಿಸಿದ್ದಾರೆ.

ಇನ್ನು, 25ಕ್ಕೂ ಹೆಚ್ಚು ಯಾತ್ರಿಗಳ ಟೆಂಟ್‌ಗಳು ನಾಶವಾಗಿದ್ದು, ಸುಮಾರು 12 ಸಾವಿರ ಯಾತ್ರಿಗಳು ಸಂಕಷ್ಟಕ್ಕೀಡಾಗಿದ್ದಾರೆ. NDRF, SDRFನಿಂದ ಬಿರುಸಿನ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಅಮರನಾಥ್ ಯಾತ್ರೆ ತಾತ್ಕಾಲಿಕ ಸ್ಥಗಿತಗೊಂಡಿದೆ.

Exit mobile version