Site icon PowerTV

ಶಿವಮೊಗ್ಗದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಮಹಿಳಾ ಭಕ್ತರು ಸೇಫ್​

ಶಿವಮೊಗ್ಗ : ನನ್ನ ಪತ್ನಿ ಸೇರಿದಂತೆ 15 ಜನ ಎಲ್ಲರೂ ಸುರಕ್ಷಿತವಾಗಿ ಇದ್ದಾರೆ ಎಂದು ಸುರೇಖಾ ಪತಿ ಮುರಳಿಧರ್ ಹೇಳಿದ್ದಾರೆ.

ನನ್ನ ಪತ್ನಿ ಸೇರಿದಂತೆ 15 ಜನ ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. 15 ಜನ ತಂಡ ಶಿವಮೊಗ್ಗದಿಂದ ತೆರಳಿದ್ದರು. ಕರ್ನಾಟಕದಿಂದ ಒಟ್ಟು 150 ಮಂದಿ ಯಾತ್ರೆಗೆ ತೆರಳಿದ್ದರು ಎಂಬ ಮಾಹಿತಿ ಇದೆ. ಸರ್ಕಾರ ಎಲ್ಲರನ್ನೂ ಕರೆತರಲು ಉತ್ತಮವಾಗಿ ಸ್ಪಂದಿಸಿದೆ. ಯಾರು ಕೂಡ ಭಯಪಡುವ ಅಗತ್ಯವಿಲ್ಲ ಎಂದರು.

ಶ್ರೀನಗರಕ್ಕೆ ತೆರಳಿ ಸೋಮವಾರ ಶಿವಮೊಗ್ಗಕ್ಕೆ ತಂಡ ವಾಪಸು ಬರಲಿದೆ. ನನ್ನ ಪತ್ನಿ ಹಾಗೂ ಅವರ ಗೆಳತಿಯರು 3 ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದರು. ನಿನ್ನೆಯೇ ಅಮರನಾಥನ ದರ್ಶನಕ್ಕೆ ಹೋಗ ಬೇಕಿತ್ತು, ಆದರೆ ಅದೃಷ್ಟವಶಾತ್ ಹೋಗಿರಲಿಲ್ಲ. ಸೋಮವಾರ ಶಿವಮೊಗ್ಗಕ್ಕೆ ವಾಪಸು ಬರಲಿದ್ದಾರೆ ಎಂದು ಹೇಳಿದರು.

Exit mobile version