Site icon PowerTV

ಕಾಂಗ್ರೆಸ್​ ವಿರುದ್ಧ ಶ್ರೀರಾಮುಲು ಕಿಡಿ

ಬಾಗಲಕೋಟೆ: ಶಾಲಾ ಮಕ್ಕಳ ಶೂ, ಸಾಕ್ಸ್ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆಯಲ್ಲಿ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳ ಶೂ-ಸಾಕ್ಸ್ ಹಂಚಿಕೆ ಸ್ವಲ್ಪ ಲೇಟಾಗಿದೆ.‌‌ ಆದ್ರೂ ಕೂಡಾ ಎಲ್ಲ ಕಡೆ ಶೂ-ಸಾಕ್ಸ್, ಶಾಲಾ ಸಮವಸ್ತ್ರ ಹಂಚಿಕೆ ಮಾಡಲಾಗುತ್ತಿದೆ. ಅದನ್ನೇ ಕಾಂಗ್ರೆಸ್ ದೊಡ್ಡ ರಾದ್ದಾಂತ ಮಾಡುವ ರಾಜಕಾರಣ ಮಾಡ್ತಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿಯೇ ನೂರಾರು ಸಮಸ್ಯೆಗಳಿವೆ. ಈ ಭಾಗದಿಂದ ಗೆದ್ದ ಸಿದ್ದರಾಮಯ್ಯ ಏನ್​​ ಮಾಡ್ತಿದ್ದಾರೆ. ಅವರು ಇನ್ನೂ ಕ್ಷೇತ್ರ ಹುಡುಕಿಕೊಂಡು ಹೋಗ್ತಿದ್ದಾರೆ. ಚಾಮರಾಜಪೇಟೆ, ವರುಣಾ, ಕೊಲಾರ, ಒಮ್ಮೆ ಸೌದತ್ತಿ ಅಂತಾ ಹೇಳ್ತಿದ್ದಾರೆ. ವೇಷ ಬದಲಾವಣೆ ಮಾಡುತ್ತಾ ಅಲೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಟ್ಟಾಗಿ ಮುಂದಿನ ಚುನಾವಣೆ ಎದುರಿಸುತ್ತೇವೆ. ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Exit mobile version