Site icon PowerTV

ಪಕ್ಷದವರೇ ನನ್ನ ಹುಟ್ಟುಹಬ್ಬ ಮಾಡ್ತಿದ್ದಾರೆ : ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮೋತ್ಸವ ರಾಜಕೀಯ ಕಾರ್ಯಕ್ರಮವೇ. ರಾಜಕೀಯವಿಲ್ಲದೇ ಏನೂ ಇಲ್ಲ. ಅಲ್ಲಿ ಎಲ್ಲರೂ ರಾಜಕೀಯ ನಾಯಕರೇ ಇರುತ್ತಾರೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಮಾತನಾಡಿದ ಅವರು, ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮ ಪಕ್ಷದ ಕಡೆಯಿಂದ ನಡೆಯೋದು. ಕಾರ್ಯಕ್ರಮಕ್ಕೆ ಬರಲು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಡಿಕೆಶಿ, ಮುನಿಯಪ್ಪ, ಎಂ.ಬಿ.ಪಾಟೀಲ್, ಖರ್ಗೆ ಅವರಿಗೆ ನಾನೇ ಆಹ್ವಾನ ನೀಡಿದ್ದೇನೆ.

ಇನ್ನು ನನ್ನ ಹುಟ್ಟುಹಬ್ಬವನ್ನು ಪಕ್ಷದವರೇ ಮಾಡುತ್ತಾರೆಂದು ತಿಳಿಸಿದರು. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಯಾರೂ ವಿರೋಧ ಮಾಡಿಲ್ಲ. ನಾನು ಇದನ್ನು ಸಿದ್ದರಾಮೋತ್ಸವ ಎಂದಿಲ್ಲ. ನನ್ನ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇದು ಅಮೃತ ಮಹೋತ್ಸವ ಕಾರ್ಯಕ್ರಮ. ನಾವೇನು ಸನ್ಯಾಸಿಗಳಾ? ರಾಹುಲ್ ಗಾಂಧಿ, ಡಿಕೆಶಿ ಸನ್ಯಾಸಿನಾ? ಏನು ಸಂದೇಶ ಇರಬೇಕೋ ಇರಲಿದೆ. ನಮ್ಮ ಕಾಲದ ಸಾಧನೆ ತೋರಿಸ್ತೀವಿ ಅಂದರೆ ಅದರಲ್ಲಿ ರಾಜಕೀಯ ಇದ್ದೇ ಇದೆ. ನನ್ನ ಜೀವನ ಸಾಧನೆ ಅಂದರೆ ಅದು ರಾಜಕೀಯ. ನಾನು ಬೇರೆ ಪಕ್ಷದ ಯಾರನ್ನೂ ಕರೆಯುತ್ತಿಲ್ಲ ಎಂದು ತಿಳಿಸಿದರು.

Exit mobile version