Site icon PowerTV

ಹೊಸ ತಂತ್ರಜ್ಞಾನದ ಬ್ರೆಜಾ ಕಾರ್ ಮಾರುಕಟ್ಟೆಗೆ ಲಾಂಚ್‌

ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಅನ್ನೋದು ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಲೇ ಇದೆ. ಅದೇ ರೀತಿ ಮಾರುತಿ ಸುಜುಕಿ ಕಂಪನಿ ಕೂಡಾ ವಿಶ್ವಮಟ್ಟದ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಇದ್ರಿಂದ ಎಷ್ಷೇ ಕಾಂಪಿಟೀಷನ್ ಇದ್ರೂ ಕೂಡಾ ಮಾರುತಿ ಸಜುಕಿ ಬೇಡಿಕೆ ಅಂತ ಕಡಿಮೆ ಯಾಗ್ತಿಲ್ಲ.

ಕಳೆದ ಕೆಲವೇ ವರ್ಷಗಳಲ್ಲಿ ರಸ್ತೆಗೆ ಇಳಿದಿದ್ದ ಮಾರುತಿ ಸುಜುಕಿ ಕಂಪನಿಯ ಬ್ರೆಜಾ ಕಾರ್‌ಗಳು ದೇಶವಿದೇಶಗಳಲ್ಲಿ ಸುಮಾರು 7.5 ಲಕ್ಷದಷ್ಟು ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಮೇಲುಗೈ ಸಾಧಿಸಿತ್ತು. ಅದೇ ರೀತಿ ಗ್ರಾಹಕರ ಬೇಡಿಕೆಯಂತೆ ಇಂದು ಹೊಸ ತಂತ್ರಜ್ಞಾನ ಉಳ್ಳ ಮತ್ತೊಂದು ವಿನೂತನ ಬ್ರೆಜಾ ಕಾರ್‌ ಅನ್ನ ಲಾಂಚ್ ಮಾಡಲಾಗಿದೆ.

ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ನಾಯಂಡಹಳ್ಳಿಯಲ್ಲಿರುವ ಮಾರುತಿ ಸುಜುಕಿಯ ಕಲ್ಯಾಣಿ ಮೋಟಾರ್ಸ್‌ನಲ್ಲಿ ಲಾಂಚ್ ಆಗಿದ್ದು, ಬಹಳ ಸಂತಸದ ವಿಷಯ. ಈ ನೂತನ ಬ್ರೆಜಾ ಕಾರ್‌ಗಳನ್ನು ಚಲನಚಿತ್ರ ನಟ ಡಾರ್ಲಿಂಗ್ ಕೃಷ್ಣ ಲೋಕಾರ್ಪಣೆಗೊಳಿಸೋ ಮೂಲಕ ಚಾಲನೆ ನೀಡಿ ಸಂತಸ ವ್ಯಕ್ತಪಡಿಸಿದ್ರು.

ಇದೇ ಸಂದರ್ಭದಲ್ಲಿ ನೂತನ ಬ್ರೆಜಾ ಕಾರ್‌ನ ಪ್ಯೂಚಸ್೯ ಆ್ಯಂಡ್ ಟೆಕ್ನಾಲಜೀಸ್ ಬಗ್ಗೆ ಕಲ್ಯಾಣಿ ಮೋಟಾರ್ಸ್‌ನ ಉಪಾಧ್ಯಕ್ಷರಾದ ಎಸ್.ಎನ್. ಶೆಟ್ಟಿ ಪವರ್ ಟಿವಿಗೆ ವಿಶ್ಲೇಷಿಸಿದ್ದು, ಕಾರ್ ಲಾಂಚ್‌ಗೂ ಮುನ್ನಾ 50 ಸಾವಿರಕ್ಕೂ ಹೆಚ್ಚು ಬ್ರೀಜಾಗಳನ್ನು ಗ್ರಾಹಕರು ಬುಕ್ ಮಾಡಿದ್ದಾರೆ. ಅಂತ ಸಂತಸ ವ್ಯಕ್ತಪಡಿಸಿದ್ರು. ಈ ನೂತನ ಕಾರ್‌ನ ಲೋಕಾರ್ಪಣೆ ಸಂದರ್ಭದಲ್ಲಿ ಕಲ್ಯಾಣಿ ಮೋಟಾರ್ಸ್‌ನ ಸಿಬ್ಬಂದಿ ಭರ್ಜರಿ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದ್ದು, ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಿದ್ರು.

Exit mobile version