Site icon PowerTV

ವರುಣನ ಅಬ್ಬರಕ್ಕೆ ತತ್ತರಿಸಿದ ಕರುನಾಡು..!

ಬೆಂಗಳೂರು :ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ಆದ್ರೆ, ದಿನ ಕಳೆದಂತೆ ಅದ್ರ ಪ್ರಭಾವವೂ ಹೆಚ್ಚಾಗುತ್ತಿದೆ. ಕರಾವಳಿ‌ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಉಡುಪಿ ತಾಲೂಕಿನ ಬೈಂದೂರಿನ ನಾವುಂದ ಮುಂತಾದ ಕಡೆ ಮಳೆಯಿಂದ ಹಲವು ಪ್ರದೇಶಗಳು ಮುಳುಗಡೆಯಾಗಿದೆ. ಇದ್ರಿಂದ ಸಾಕಷ್ಟು ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ.

ಮುಂಗಾರು ವೇಗ ಪಡುತ್ತಿದ್ದಂತೆ ಕಡಲ್ಕೊರತವೂ ಆರಂಭವಾಗಿದೆ. ಮರಂತೆ, ನಾವುಂದ ಭಾಗದಲ್ಲಿ ಕಡಲ್ಕೊರೆತ ವ್ಯಾಪಕವಾಗಿದ್ದು ಅದು ತೀವ್ರಗೊಂಡು ಕಡಲ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿವೆ. ಮೀನುಗಾರರ ಮನೆಗಳು ಅಪಾಯದ ಭೀತಿಯಲ್ಲಿವೆ. ಈ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಅಪಾಯದ ನಡುವೆ ಸಾಗಬೇಕಾದ ಸ್ಥಿತಿ ಎದುರಾಗಿದೆ.‌ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಈವರೆಗೆ ಸ್ಥಳಕ್ಕೆ ಬಾರದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸ್ಥಳೀಯ‌ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ದಾವಣಗರೆ, ಚಿಕ್ಕಮಗಳೂರು ‌ಸೇರಿದಂತೆ ಇನ್ನುಳಿದ ಜಿಲ್ಲೆಯಲ್ಲೂ ಮಳೆ ಜೋರಾಗಿದೆ. ಹೀಗಾಗಿ ತುಂಬಾಭದ್ರ ನದಿ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ರವಾನಿನಿಸಿದ್ದು ನದಿಗೆ ಇಳಿಯದಂತೆ ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲಿನ ಮಳೆಯ ಪರಿಣಾಮ ಕೃಷ್ಣಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನೆರೆ ಸಂತೃಸ್ತರ ನೆರವಿಗೆ NDRF ಪಡೆ ಸಿದ್ದವಿರುವಂತೆ ಸೂಚಿಸಿದ್ದಾರೆ. ಹಾಗೆ ಹಾಸನದ ಹೇಮಾವತಿ ನದಿ ತುಂಬಲು 9 ಅಡಿ‌ ಮಾತ್ರ ಬಾಕಿಯಿದ್ದು, ಯಾವುದೇ ಸಮಯದಲ್ಲಾದ್ರೂ ನೀರು ಬಿಡುವ ಸಾಧ್ಯತೆಯಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ 10 ಕೋಟಿ ಹಣ ಜಿಲ್ಲಾಧಿಕಾರಿಗಳ ಬಳಿ ಇದೆ. ಶೀಘ್ರವಾಗಿ ಜನರ ನೆರವಿಗೆ ಧಾವಿಸಿ ಅಂತ ಖಡಕ್ ಸೂಚನೆ ರವಾನಿಸಿದ್ದಾರೆ.

ಇನ್ನು ಹಲವು ದಿನ ಮಳೆಯಾಗೋದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಇನ್ನು ನೆರವು ಕೆಲಸ ಶೀಘ್ರವಾಗಿ ಆಗಬೇಕಾಗಿದೆ. ಅಧಿಕಾರಿಗಳು ತಕ್ಷಣ ಸಂತೃಸ್ತರ ನೆರವಿಗೆ ಧಾವಿಸಬೇಕು.

ರೂಪೇಶ್ ಬೈಂದೂರು ಪವರ್ ಟಿವಿ ಬೆಂಗಳೂರು

Exit mobile version