ಚಿನ್ನಾಭರಣ ಕದಿಯುತ್ತಿದ್ದ ಆರೋಪಿ ಅಂದರ್​

ಬೆಂಗಳೂರು : ಹೆಣ್ಣು ದೇವರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಕದಿಯುತ್ತಿದ್ದ ಘಟನೆ ಮಾರತ್ತಹಳ್ಳಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಆರೋಪಿ ಕಳ್ಳ ಚಂದ್ರ(35) ಚೌಡೇಶ್ವರಿ ದೇವಸ್ಥಾನದಲ್ಲಿ ದೇವರ ತಾಳಿ ಕದ್ದೊಯ್ದ ಕಳ್ಳ ಜುಲೈ 4 ರ ಬೆಳಗ್ಗೆ 7.30 ರ ಸುಮಾರಿಗೆ ಕಳ್ಳತನ ಮಾಡಿದ್ದಾನೆ. ಹಾಗೆನೇ ಈ ಘಟನೆ ನಡೆದ ಎರಡೇ ಗಂಟೆಯಲ್ಲಿ ಮಾರತ್ತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗ್ಗೆ ದೇವರಿಗೆ ಕೈ ಮುಗಿಯುವ ನೆಪದಲ್ಲಿ ಬಂದಿದ್ದ ಆಸಾಮಿ. ಪೂಜಾರಿ ಗರ್ಭಗುಡಿಯಿಂದ ಹೊರಗೆ ಹೋಗ್ತಿದ್ದಂತೆ ತನ್ನ ಕೈಚಳಕದಿಂದ ಗರ್ಭಗುಡಿಗೆ ತೆರಳಿ ತಾಳಿ ಕಿತ್ತೊಯ್ದು ಪರಾರಿಯಾಗಿದ್ದಾರೆ. ತಕ್ಷಣ ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.

ಇನ್ನು, ಅರ್ಚಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾರತ್ತಹಳ್ಳಿ ಪೊಲೀಸರು ಆರೋಪಿ ಚೇಸ್ ಮಾಡಿದ್ದು, ಬಂಧಿತನಿಂದ ಕಳ್ಳತನವಾಗಿದ್ದ ಒಂದು ತಾಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಕೂಡ ಬನಶಂಕರಿ ದೇವಸ್ಥಾನದಲ್ಲೂ ಕಳ್ಳತನ ಮಾಡಿದ್ದಾನೆ.

RELATED ARTICLES

Related Articles

TRENDING ARTICLES