ಕೋಲಾರ : ಜಿಲ್ಲಾ ರಕ್ಷಣಾಧಿಕಾರಿ ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿ ಗಮನ ಸೆಳೆದರು. ಕೋಲಾರ ತಾಲೂಕಿನ ವೇಮಗಲ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ, ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್, ವಿಜ್ಞಾನ ವಿಷಯದ ಸೂಕ್ಷ್ಮಾಣು ಜೀವಿಗಳ ಕುರಿತು ಪಾಠ ಮಾಡಿದ್ರು.
ಖಾಸಗಿ ಕಂಪನಿಯವ್ರು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್ಪಿ ಡಿ.ದೇವರಾಜ್, ಕಾರ್ಯಕ್ರಮ ಮುಗಿದ ನಂತರ ಶಾಲಾ ಕೊಠಡಿಗೆ ತೆರಳಿ ಪಾಠ ಮಕ್ಕಳಿಗೆ ಪಾಠ ಮಾಡಿದ್ರು. ಬಳಪ ಹಿಡಿದು ಬೋರ್ಡ್ ಮೇಲೆ ಸೂಕ್ಷ್ಮಾಣು ಜೀವಿಗಳ ಬಗ್ಗೆ ಚಿತ್ರ ಬರೆದು ಮಕ್ಕಳಿಗೆ ಅರ್ಥ ಆಗುವ ರೀತಿಯಲ್ಲಿ ಪಾಠ ಮಾಡಿದ್ರು. ಈ ಹಿಂದೆ ಉಪನ್ಯಾಸಕರಾಗಿ ಸೇವೆ ಸಲ್ಲಿದ್ದ ದೇವರಾಜ್, ಆ ದಿನಗಳ ಉಪನ್ಯಾಸ ವೃತ್ತಿಯನ್ನ ಮೆಲುಕು ಹಾಕಿದ್ರು.


