ಬೆಂಗಳೂರು : ಕಾಯ್ದೆಯ ಬಗ್ಗೆ ಕೆಲವು ಶಾಸಕರಿಗೆ ಗೌರವವಿಲ್ವಾ..? ದೊಡ್ಡ ದೊಡ್ಡ ನಾಯಕರೇ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.
ಕಾನೂನು ಪಾಲಿಸಬೇಕಾದ ಜನಪ್ರತಿನಿಧಿಗಳೇ ಯಾಕಿಷ್ಟು ನಿರ್ಲಕ್ಷ್ಯ..? ಇನ್ನೂ ಕೆಲವು ಶಾಸಕರಿಂದ ಆಸ್ತಿ ವಿವರ ಸಲ್ಲಿಸಿಲ್ಲ. ಪ್ರತಿ ವರ್ಷ ಶಾಸಕರು ತಮ್ಮ ಆಸ್ತಿ ವಿವರವನ್ನ ಸಲ್ಲಿಸಬೇಕು. ಜೂನ್ 30ರೊಳಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕು. ಆದರೆ ಇನ್ನೂ ಕೆಲವು ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ.
ಇನ್ನು, 224 ಶಾಸಕರಲ್ಲಿ 127 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ತಮ್ಮ ಆಸ್ತಿ ವಿವರವನ್ನ ಲೋಕಾಯುಕ್ತಕ್ಕೆ ನೀಡಿಲ್ಲ. ದೊಡ್ಡ ದೊಡ್ಡ ನಾಯಕರೇ ಆಸ್ತಿ ವಿವರ ಸಲ್ಲಿಸಿಲ್ಲ. ಗೃಹ ಸಚಿವ ಆರಗ ಜ್ಙಾನೇಂದ್ರ, ಶ್ರೀರಾಮುಲು, ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯ, ಡಿಕೆಶಿ ಸೇರಿ ಘಟಾನುಘಟಿ ಶಾಸಕರೇ ಆಸ್ತಿ ವಿವರ ಸಲ್ಲಿಸಿಲ್ಲ.


