Site icon PowerTV

ಚಿರತೆ ದಾಳಿಗೆ ಬಲಿಯಾಗಿದ್ದ ಕರು ಶವವನ್ನು ಪತ್ತೆ ಹಚ್ಚಿದ ತಾಯಿ ಹಸು

ಮಂಡ್ಯ: ಚಿರತೆ ದಾಳಿಗೆ ಬಲಿಯಾಗಿದ್ದ ಕರುವನ್ನು ತಾಯಿ ಹಸು ಪತ್ತೆ ಹಚ್ಚಿರುವ ಅಪರೂಪದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ  ಹಲಗೂರು ಗ್ರಾಮದಲ್ಲಿ ನಡೆದಿದೆ.

ರೈತ ಚಂದ್ರಶೇಖರ್​​ಗೆ ಸೇರಿದ ಹಸು. ರೈತ ಎಂದಿನಂತೆ ಮನೆಯ ಕೊಟ್ಟಿಗೆಯಲ್ಲಿ ಹಸಯಗಳನ್ನು ಕಟ್ಟಿಹಾಕಿದ್ದ. ಆದರೆ, ನಿನ್ನೆ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ 4ವರ್ಷದ ಹಸುವಿನ ಕರುವನ್ನು ರಾತ್ರಿ ಚಿರತೆ ಬಂದು ಎಳೆದು ಹೋಗಿದೆ.

ಇನ್ನು ಬೆಳಗ್ಗೆ ಎದ್ದ ರೈತ‌ ಚಂದ್ರಶೇಖರ್​​ಗೆ ಕಂಡಿದ್ದು ಹಸು ಮಾತ್ರ. ಕೊಟ್ಟಿಗೆಯಲ್ಲಿದ್ದ ಕರು ಕಾಣೆಯಾದ ಬಗೆಗೆ ಆತಂಕಗೊಂಡಿದ್ದರು ಜೊತೆಗೆ ತಾಯಿ ಹಸುವಿನ ತೊಳಲಾಟ ನೋಡಲಾಗದೆ ಅದರ ಹಗ್ಗವನ್ನು ಬಿಚ್ಚಿದ್ದಾರೆ.

ಹಗ್ಗ ಬಿಚ್ಚಿದ್ದೆ ತಡ ಅಂಬಾ ಎಂದು ಕೂಗುತ್ತಾ ಕರುವನ್ನ ಹುಡುಕಿ ಹೊರಟಿದೆ. ಸುಮಾರು ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕರುವಿನ ಮೃತದೇಹ ಪತ್ತೆ ಹಚ್ಚಿದೆ. ಅಲ್ಲಿ ಹೋಗಿ ನೋಡಿದಾಗ ಚಿರತೆ ಕರುವನ್ನ ಕೊಂದು ತಿಂದು ಹೋಗಿದ ದೃಶ್ಯ ಕಂಡಿದೆ. ಇನ್ನು ತನ್ನ ಕರುವನ್ನು ಹುಡುಕಿದ ತಾಯಿ ಹಸುವಿನ ಬಗೆಗೆ ರೈತ ಚಂದ್ರಶೇಖರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Exit mobile version