ಬೆಂಗಳೂರು : ಶ್ವಾನಗಳ ಮೇಲೆ ಮನುಷ್ಯನ ಅಟ್ಟಹಾಸಕ್ಕೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಐಷಾರಾಮಿ ಕಾರಿನ ಚಕ್ರಕ್ಕೆ ಸಿಲುಕಿ ಶ್ವಾನವೊಂದು ಬಲಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿಗೆ ಶ್ವಾನಗಳ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು, ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯ ಗಣನೀಯ ಏರಿಕೆ ಕಂಡಿದೆ. ಬೀದಿ ನಾಯಿ ಮೇಲೆ ಕಾರು ಹತ್ತಿಸಿದ ಕಿಡಿಗೇಡಿ ಸಿಸಿಟಿವಿಯಲ್ಲಿ ಶ್ವಾನದ ಮೇಲೆ ಕಾರು ಹತ್ತಿಸೋ ದೃಶ್ಯ ಸೆರೆಯಾಗಿದೆ.
ಇಂದಿರಾನಗರದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾರು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಶ್ವಾನ ಲಾರಾ ಸಾವು ಸಾಕಷ್ಟು ಸುದ್ದಿಯಾಗಿತ್ತು, ಆ ಸುದ್ದಿ ಮಾಸುವ ಮುನ್ನ ಮತ್ತಷ್ಟು ಶ್ವಾನಗಳ ಮೇಲಿನ ದೌರ್ಜನ್ಯ ಬೆಳಕಿಗೆ ಬಂದಿದೆ.


