ಡೈನಾಮಿಕ್ ಶರೀರಕ್ಕೆ ಆರ್ಮುಗಂ ಶಾರೀರ ಸಾಥ್..!

ಬೇಸ್ ವಾಯ್ಸ್ ಇರೋ ಇಬ್ಬರು ದಿಗ್ಗಜರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಮುಖಾಮುಖಿ ಆದ್ರು. ಒಂದು ಕಾಲದಲ್ಲಿ ಒಬ್ರಿಗೆ ಇನ್ನೊಬ್ರು ವಾಯ್ಸ್ ಆಗಿದ್ರು. ಇದೀಗ ಇಬ್ಬರೂ ಬಹುಭಾಷಾ ನಟರಾಗಿ ನಾಯ್ಸ್ ಮಾಡ್ತಿದ್ದಾರೆ. ಇವ್ರ ದಶಕಗಳ ಜರ್ನಿ ಜೊತೆ ಕಲಾಭಿಮಾನ ಎಂಥದ್ದು ಅನ್ನೋದ್ರ ಝಲಕ್ ನಿಮಗಾಗಿ ಕಾಯ್ತಿದೆ.

ಡೈನಾಮಿಕ್ ಶರೀರಕ್ಕೆ ಆರ್ಮುಗಂ ಶಾರೀರ ಸಾಥ್..!

ದಿಗ್ಗಜರಿಂದ ಸ್ಟೇಜ್ ಮೇಲೆನೇ ಆ್ಯಕ್ಟಿಂಗ್ & ಡಬ್ಬಿಂಗ್

ಬೇಸ್​​ ವಾಯ್ಸ್​ಗೆ ಬೆಸ್ಟ್​ ವಿಲನ್​ ನಂದಿ ಅವಾರ್ಡ್​

ಹಳೆ ನೆನಪು ಮೆಲುಕು ಹಾಕಿದ ನಟ ಭಯಂಕರರು

ಲಂಕಾಸುರ ಟೀಸರ್ ಲಾಂಚ್ ಫಂಕ್ಷನ್​ನಲ್ಲಿ ಚಿತ್ರರಂಗದ ಇಬ್ಬರು ಅಪೂರ್ವ ಕಲಾವಿದರ ಸಮಾಗಮದಿಂದ ಆ ಕಾರ್ಯಕ್ರಮದ ಅಂದ ಚೆಂದ ಹೆಚ್ಚಿತು. ಅದು ಬೇರಾರೂ ಅಲ್ಲ, ಡೈನಾಮಿಕ್ ಹೀರೋ ದೇವರಾಜ್ ಹಾಗೂ ಆರ್ಮುಗಂ ರವಿಶಂಕರ್. ಅಲ್ಲೇ ಆನ್ ಸ್ಪಾಟ್​ನಲ್ಲಿ ಌಕ್ಟಿಂಗ್ ಒಬ್ರು ಮಾಡಿದ್ರೆ, ಮತ್ತೊಬ್ರು ವಾಯ್ಸ್ ಡಬ್ ಮಾಡಿ ಎಲ್ಲರ ಶಿಳ್ಳೆ ಚಪ್ಪಾಳೆಗೆ ಸಾಕ್ಷಿಯಾದ್ರು.

ದೇವರಾಜ್​​ ಕೇವಲ ಕನ್ನಡ ಮಾತ್ರವಲ್ಲದೆ ಟಾಲಿವುಡ್​ನಲ್ಲೂ ಆರ್ಭಟಿಸಿದ ಬಹುಮುಖ ಪ್ರತಿಭೆ. ಈ ಕಾರ್ಯಕ್ರಮದಲ್ಲಿ ನಡೆದ ಒಂದು ಪ್ರಸಂಗ ಎಲ್ಲರಿಗೂ ಅಚ್ಚರಿ ಮೂಡಿಸಿತು. ತೆಲುಗು ಚಿತ್ರರಂಗದಲ್ಲಿ ಹೆಸ್ರು ಮಾಡೋಕೆ ಕಾರಣ ಈ ವಾಯ್ಸ್​ ಕಾರಣ ಅಂತ ಆರ್ಮುಗಂ ದನಿಗೆ ಮೆಚ್ಚುಗೆ ಸೂಚಿಸಿದ್ರು ಡೈನಾಮಿಕ್​ ಹೀರೋ. ಈ ಮಾತು ಕೇಳ್ತಿದ್ದಂತೆ ಆರ್ಮುಗಂ ರವಿಶಂಕರ್ ಥಟ್ ಅಂತ​ ದೇವರಾಜ್ ಅವ್ರ​ ಕಾಲಿಗೆ ನಮಸ್ಕರಿಸಿಬಿಟ್ಟರು.

ಲಂಕಾಸುರ ಚಿತ್ರದಲ್ಲಿ ಇವರಿಬ್ಬರ ಗತ್ತು, ಗಮ್ಮತ್ತಿನಿಂದ ಚಿತ್ರದ ತೂಕ ಹೆಚ್ಚಿದೆ. ಆದ್ರೆ ತೆಲುಗು ಸಿನಿಮಾ ಎರ್ರ ಮಂದಾರಂನಲ್ಲಿ ದೇವರಾಜ್​ಗೆ ವಾಯ್ಸ್​ ಡಬ್​ ಮಾಡಿದ್ದು ಇದೇ ರವಿಶಂಕರ್​ ಅಂತೆ. ವಿಲನ್​ ರೋಲ್​ನಲ್ಲಿ ಮಿಂಚಿದ್ದ ಡೈನಾಮಿಕ್​ ಹೀರೋಗೆ ಬೆಸ್ಟ್​ ವಿಲನ್​​ ನಂದಿ ಅವಾರ್ಡ್ ಕೂಡ​ ಬಂದಿತ್ತಂತೆ.

ಸಾವಿರಾರು ಸಿನಿಮಾಗಳಿಗೆ ದನಿ ನೀಡಿರುವ ರವಿಶಂಕರ್,​ ಟಾಲಿವುಡ್​​ನ ಅನೇಕ ವಿಲನ್​ ಪಾತ್ರಗಳಿಗೆ ವಾಯ್ಸ್ ಮೂಲಕ ಜೀವ ತುಂಬಿದ್ದಾರೆ. ಇವ್ರ ದನಿಯಲ್ಲಿ ಅನೇಕ ಸ್ಟಾರ್​ಗಳು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಅರುಂಧತಿ ಸಿನಿಮಾದಲ್ಲಿನ ಇವ್ರ ದನಿಯನ್ನು ಇಂದಿಗೂ ಮರೆಯೋಕೆ ಸಾಧ್ಯವಿಲ್ಲ. ಇತ್ತೀಚೆಗೆ ಕನ್ನಡದಲ್ಲಿ ಸಖತ್​ ಬ್ಯುಸಿ ನಟರಲ್ಲಿ ಒಬ್ಬರಾಗಿರೋ ರವಿಶಂಕರ್,​ ಕೆಂಪೇಗೌಡ ಚಿತ್ರದ ಆರ್ಮುಗಂ ಪಾತ್ರದ ಮೂಲಕ ಜನಪ್ರಿಯರಾದ್ರು.

ಕನ್ನಡದ ಅನೇಕ ಸಿನಿಮಾಗಳಲ್ಲಿ ಪೊಲೀಸ್​ ಖಡಕ್​ ರೋಲ್​ನಲ್ಲಿ ಮಿಂಚಿರುವ ದೇವರಾಜ್​​ ಟಾಲಿವುಡ್​ನಲ್ಲೂ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ. ಇವರಿಬ್ರ ಕಾಂಬೋದಲ್ಲಿ ಲಂಕಾಸುರ ಸಿನಿಮಾ ಮತ್ತಷ್ಟು ಹೈಪ್​ ಕ್ರಿಯೇಟ್​ ಮಾಡಿದೆ. ವಿನೋದ್​ ಪ್ರಭಾಕರ್​ ಲುಕ್​ಗೆ ಕ್ಲೀನ್​ ಬೋಲ್ಡ್ ಆಗಿರೋ ಪ್ರೇಕ್ಷಕರು ದೇವರಾಜ್​ ಹಾಗೂ ಆರ್ಮುಗಂ ರವಿಶಂಕರ್​ ಆ್ಯಕ್ಟಿಂಗ್​ ಕೂಡ ಕಣ್ತುಂಬಿಕೊಳ್ಳಬಹುದು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES