ಬೆಂಗಳೂರು ಮಾಜಿ ಡಿಸಿ ಮಂಜುನಾಥ್ ಎಸಿಬಿ ಬಲೆಗೆ ಬಿದ್ದದ್ದು ಹೇಗೆ..?

ಬೆಂಗಳೂರು : ಮಂಜುನಾಥ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಎಸಿಬಿ ಆಕ್ಷೇಪಣೆಯಲ್ಲಿ ಡಿಸಿ ಅಕ್ರಮದಲ್ಲಿ ಹೇಗೆ ಭಾಗಿಯಾದ್ದಾರೆ ಎಂದು ತನಿಖೆ ನಡೆಸಿದ್ದಾರೆ.

ಆನೆಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಾಗ ವಿವಾದ ಇದು, ವೆಂಕಟಸ್ವಾಮಿ ಎಂಬುವವರು ಸಲ್ಲಿಸಿದ್ದ ಅರ್ಜಿ ಎಸಿ ವಜಾಗೊಳಿಸಿದ್ದರು. ಎಸಿ ಆದೇಶ ಪ್ರಶ್ನೆ ಮಾಡಿ 2020 ಜನವರಿಯಲ್ಲಿ ಡಿಸಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಡಿಸಿ ಮಂಜುನಾಥ್ ಆದೇಶ ಕಾಯ್ದಿರಿಸಿದ್ದರು. 2022ರ ಮಾರ್ಚ್ 30ರಂದು ವಿಚಾರಣೆ ಮುಕ್ತಾಯಗೊಳಸಿದ್ದರು.

ಇನ್ನು, ಒಂದೂವರೆ ತಿಂಗಳಾದ್ರೂ ಆದೇಶ ಮಾಡದ ಕಾರಣ ಮೇ 18ರಂದು ಡಿಸಿ ಭೇಟಿ ಮಾಡಿದ್ದ ಆಜಂ ಪಾಷಾ, ಮೇ 19 ರಂದು ಡಿಸಿ ಕಚೇರಿಯಲ್ಲೇ ಉಪ ತಹಸಿಲ್ದಾರ್ ಮಹೇಶ್ ಡೀಲ್ ಮಾತುಕತೆ ನಡೆಸಿದ್ದಾರೆ. ಎಷ್ಟು ಲಂಚ ಕೊಡ್ತಿಯಾ ಅಂತ ನೇರವಾಗಿ ಕೇಳಿದ್ದ . ಕಾನೂನು ಪ್ರಕಾರ ಉಚಿತವಾಗಿ ಮಾಡಿಕೊಡುವಂತೆ ಆಜಂ ಪಾಷಾ ಮನವಿ ಮಾಡಿದ್ದರು. 15 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಉಪತಹಸಿಲ್ದಾರ್ , ಲಂಚದ ಬಗ್ಗೆ ಬಾಯಿ ಬಿಡದೇ ಕಾಗದದಲ್ಲಿ ಬರೆದು ತೋರಿಸಿದ್ದ. 15 ಸಾಧ್ಯವಿಲ್ಲ ಎಂದಾಗ 8 ಲಕ್ಷಕ್ಕೆ ಬೇಡಿಕೆ, ನಂತರ 5 ಲಕ್ಷಕ್ಕೆ ಡೀಲ್ ಕುದುರಿಸಿದ್ದ.

ಉಪ ತಹಸಿಲ್ದಾರ್ ಮಹೇಶ್ ಲಂಚಕ್ಕೆ ಬೇಡಿಕೆ ಇಟ್ಟ ಸಂಭಾಷಣೆ ರೆಕಾರ್ಡ್ ಮಾಡಿದ್ದ ಆಜಂ ಪಾಷಾ ಲಂಚದ ಹಣದ ಬಗ್ಗೆ ಮಹೇಶ್ ಬರೆದುಕೊಟ್ಟ ಪೇಪರ್ ಸಮೇತ ಎಸಿಬಿಗೆ ದೂರು ನೀಡಿದ್ದರು. ಮಹೇಶ್ ಹಾಗೂ ಚೇತನ್ ಕುಮಾರ್ @ ಚಂದ್ರುಗೆ ಹಣ ನೀಡುವಾಗ ಎಸಿಬಿ ದಾಳಿ ಮಾಡಿದ್ದು, ಉಪ ತಹಸಿಲ್ದಾರ್ ಲಂಚಕ್ಕಾಗಿ ಚೌಕಾಸಿ ಮಾಡುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಅದಲ್ಲದೇ, ಇಷ್ಟು ಹೇಳ್ತೀನಿ, ಎಸ್ ಅಂತ ಒಪ್ಪಿಕೊಂಡ್ರೆ ಮಾಡಿಸಿಕೊಡ್ತಿನಿ ಎಂದಿರುವ ಅವರು, ಮಾರ್ಚ್ 30 ರಂದೇ ಆಜಂ ಪಾಷಾ ಅವರ ಪರ ಆದೇಶ ಬರೆಸಿ ಸಹಿ ಮಾಡದ ಜಿಲ್ಲಾಧಿಕಾರಿ. ಲಂಚಕ್ಕಾಗಿ ಡಿಸಿ ಅವರು ಮಹೇಶ್, ಚಂದ್ರು ಬಳಕೆ ಮಾಡಿಕೊಂಡಿರುವ ಬಗ್ಗೆ ಸಾಕ್ಷಿ ಲಭ್ಯವಾಗಿದೆ.

RELATED ARTICLES

Related Articles

TRENDING ARTICLES