Site icon PowerTV

ಬೆಳ್ಳಂಬೆಳಗ್ಗೆ ಕಾಂಗ್ರೆಸ್​ ಶಾಸಕ ಜಮೀರ್​ಗೆ ಎಸಿಬಿ ಶಾಕ್​

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಹಿನ್ನಲೆಯಲ್ಲಿ ಜಮೀರ್​ ನಿವಾಸ, ಕಚೇರಿ ಮೇಲೆ 40ಕ್ಕೂ ಹೆಚ್ಚು ಪೊಲೀಸರು ರೇಡ್​ ಮಾಡಿದ್ದಾರೆ.

ಜಮೀರ್​ ಅಹ್ಮದ್​ ಖಾನ್​, ಚಾಮರಾಜಪೇಟೆ ಶಾಸಕರಾಗಿದ್ದು, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಹಿನ್ನಲೆಯಲ್ಲಿ ಎಸಿಬಿ ದಾಳಿ ಮಾಡಿದ್ದಾರೆ. 40ಕ್ಕೂ ಹೆಚ್ಚು ಪೊಲೀಸರಿಂದ ಮೆಗಾ ರೇಡ್​ ಮಾಡಿದ್ದು, ಓರ್ವ SP, 5 DySP, 8 ಇನ್ಸ್​ಪೆಕ್ಟರ್​ಗಳ ನೇತೃತ್ವದ ತಂಡ ಜಮೀರ್​ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಜಮೀರ್​ ನಿವಾಸ ಮೇಲೆ ಐಟಿ ದಾಳಿ ನಡೆದಿತ್ತು. ಐಟಿ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿದ್ದರು. ಜಮೀರ್​ ಒಡೆತನದ ನ್ಯಾಷನಲ್​ ಟ್ರಾವೆಲ್ಸ್ ಕಚೇರಿ ಮೇಲೂ ದಾಳಿ ನಡೆದಿತ್ತು. ಜಮೀರ್ ಅಹ್ಮದ್​ ಖಾನ್​ ಸಿದ್ದರಾಮಯ್ಯ ಆಪ್ತರಾಗಿದ್ದಾರೆ. ಕೆಲ ದಿನಗಳ ಹಿಂದೆ KGF ಬಾಬು ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ವಿಚಾರಣೆ ವೇಳೆ ಜಮೀರ್​ ಹೆಸರು ಹೇಳಿದ್ದ KGF ಬಾಬು ಜಮೀರ್​ ಅಹ್ಮದ್ ಖಾನ್​ಗೆ ಸಾಲ ಕೊಟ್ಟಿರೋದಾಗಿ ಹೇಳಿದ್ದರು.

ಇನ್ನು, IMA ಬಹುಕೋಟಿ ಹಗರಣದಲ್ಲೂ ಜಮೀರ್​ ಹೆಸರು ಕೇಳಿ ಬಂದಿತ್ತು. ಜಮೀರ್ ಅಹ್ಮದ್ ಖಾನ್​ ಮತ್ತು ರೋಷನ್​ ಬೇಗ್​ ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಿದರು. ಮನ್ಸೂರ್​ ಖಾನ್​ ಜೊತೆಗಿನ ವ್ಯವಹಾರದ ಬಗ್ಗೆ ವಿಚಾರಣೆ ಎದುರಿಸಿದ್ದರು. ಹಾಗಾಗಿ ಇವರಿಬ್ಬರ ಮನೆಗಳು ಮೇಲೆ ​ಇಡಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಅದಲ್ಲದೇ, ಶಾಸಕ ಜಮೀರ್ ಅಹಮದ್​ ಮಗಳ ಮದುವೆಗೆ ಹಣ, ಚಿನ್ನ ನೀಡಿದ್ದರ ಬಗ್ಗೆ ಮನ್ಸೂರ್ ಇಡಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಜಮೀರ್ ಅಹ್ಮದ್ ಖಾನ್ ಕೂಡ ತಮ್ಮ ಮಗಳ ಮದುವೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದ್ದರು. ಇದೇ ವಿಚಾರವಾಗಿ ಶಾಸಕ ಜಮೀರ್ ಮನೆ ಮೇಲೆ ಈಗ ದಾಳಿ ನಡೆದಿದೆ ಎನ್ನಲಾಗಿದೆ.

Exit mobile version