Site icon PowerTV

ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ: 40 ಸೆಕೆಂಡ್​ನಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ

ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆಯಾಗಿದೆ. ವಾಸ್ತು ತಜ್ಞನ ಹತ್ಯೆಯಿಂದಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಿ ಜನತೆ ಬೆಚ್ಚಿಬಿದ್ದಿದ್ದಾರೆ.ಇಷ್ಟಕ್ಕೂ ಗುರೂಜಿಯನ್ನು ಕೊಂದಿದ್ಯಾರು..? ಪೊಲೀಸರು ಹೇಳುವುದೇನು..?

ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು ಭೀಕರವಾಗಿ ಕೊಲೆಗೈಯ್ಯಲಾಗಿದೆ.ಹುಬ್ಬಳ್ಳಿಯ ಪ್ರೆಸಿಡೆಂಟ್​ಹೋಟೆಲ್‌ನಲ್ಲೇ ಈ ಘಟನೆ ನಡೆದಿದೆ.ವಾಸ್ತು ಕೇಳುವ ನೆಪದಲ್ಲಿ ಹೋಟೆಲ್‌ಗೆ ಬಂದ ಆರೋಪಿಗಳು ಗುರೂಜಿಯನ್ನು 60ಕ್ಕೂ ಹೆಚ್ಚು ಬಾರಿ ಮಾರಕಾಸ್ತ್ರದಿಂದ ಚುಚ್ಚಿ ಚುಚ್ಚಿ ಗುರೂಜಿಯನ್ನು ಕೊಲೆಗೈಯ್ಯಲಾಗಿದೆ. ಹತ್ಯೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಗುರೂಜಿ ಕೊಲೆಗೆ ಕೆಲ ದಿನಗಳಿಂದಲೇ ಹಂತಕರು ಸ್ಕೆಚ್‌ ಹಾಕಿದ್ದರು ಎನ್ನಲಾಗಿದೆ. ಕೇವಲ 40 ಸೆಕೆಂಡ್‌ಗಳಲ್ಲೇ 60 ಬಾರಿ ಚುಚ್ಚಿ ಚುಚ್ಚಿ ಕೊಲೆಗೈಯ್ಯಲಾಗಿದೆ. ಓರ್ವ ಹಂತಕ 31 ಬಾರಿ ಚುಚ್ಚಿದ್ರೆ, ಮತ್ತೊರ್ವ 29 ಸಲ ಇರಿದಿದ್ದಾನೆ.ಚಂದ್ರಶೇಖರ್‌ ಗುರೂಜಿ ಅವರ ಮೃತದೇಹವನ್ನು ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಯಿತು.

ವಾಸ್ತುತಜ್ಞನ ಹತ್ಯೆಗೆ ರೋಚಕ ಟಿಸ್ಟ್‌ :

ಇನ್ನು ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ ಹತ್ಯೆಗೆ ರೋಚಕ ಟಿಸ್ಟ್‌ ಸಿಕ್ಕಿದೆ. ಗುರೂಜಿಗೆ ಆಪ್ತರಾಗಿದ್ದವರಿಂದಲೇ ಅವರ ಕೊಲೆಯಾಗಿದ್ದು, ಮಹಿಳೆ ಸೇರಿ ಮೂವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಗುರೂಜಿ ಮನೆಯಲ್ಲಿ ಕೆಲಸಕ್ಕಿದ್ದ ಅವರ ಆಪ್ತೆ ಎನ್ನಲಾದ ವನಜಾಕ್ಷಿ, ಆಕೆಯ ಪತಿ ಮಹಾಂತೇಶ್ ಹಾಗೂ ಮಂಜುನಾಥ್ ಮರೆವಾಡ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಕೇವಲ ನಾಲ್ಕೇ ತಾಸುಗಳಲ್ಲಿ ಈ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಆಯುಕ್ತ ಲಾಬುರಾಂ ವಿಶೇಷ ತಂಡ ರಚಿಸಿದ್ದರು.

ಇನ್ನು ಚಂದ್ರಶೇಖರ್ ಗುರೂಜಿಯನ್ನು ಕೊಲೆ ಮಾಡಿದವರು ಯಾರೇ ಇದ್ದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಒಟ್ಟಾರೆ ಸರಳ ವಾಸ್ತು ಖ್ಯಾತಿಯ ಗುರೂಜಿಯ ಕಗ್ಗೊಲೆ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಆಪ್ತರಾಗಿದ್ದವರಿಂದಲೇ ಗುರೂಜಿ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ..

ಬ್ಯೂರೋ ರಿಪೋರ್ಟ್ ಪವರ್ ಟಿವಿ

Exit mobile version