Site icon PowerTV

ನರೇಶ್ ನನ್ನ ಮದುವೆಯಾಗಿದ್ದೇ ರಾಜಕೀಯ ಉದ್ದೇಶಕ್ಕಾಗಿ : ರಮ್ಯಾ ರಘುಪತಿ

ಮೈಸೂರು : ನನ್ನ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ ಎಂದು ತೆಲುಗಿನ ಖ್ಯಾತ ನಟ ಪತ್ನಿ ರಮ್ಯಾ ರಘುಪತಿ ಮೈಸೂರಿನಲ್ಲಿ ಅವರ ಪತಿ ವಿರುದ್ದ ಕಿಡಿಕಾಡಿದರು.

ಇಂದು ಮೈಸೂರಿನ ಖಾಸಗಿ ಹೊಟೇಲ್​​ವೊಂದರಲ್ಲಿ ನಟಿ ಪವಿತ್ರಾ ಲೋಕೇಶ್​​ ಹಾಗೂ ತೆಲುಗು ನಟ ನರೇಶ್​​​ ಇಬ್ಬರು ರೆಡ್​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಶ್ ನನ್ನನ್ನು ಮದುವೆಯಾಗಿದ್ದೇ ರಾಜಕೀಯ ಉದ್ದೇಶಕ್ಕಾಗಿ. ಮದುವೆಯಾಗಿ ಎರಡು ವರ್ಷ‌ ಮಾತ್ರ ನರೇಶ್ ಅನ್ಯೋನ್ಯವಾಗಿದ್ದರು. ಆ ಬಳಿಕ ನನಗೆ ತೊಂದರೆ ಕೊಡುತ್ತಲೇ ಬಂದಿದ್ದಾರೆ. ಆದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

ಅಷ್ಟೆಅಲ್ಲದೇ ನನ್ನ ಮಗನಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಅದರೀಗ ನನಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡುವುದಿಲ್ಲ. ನಾನು ಒಳ್ಳೆಯ ಮನೆತನಕ್ಕೆ ಸೇರಿದವಳು. ನನ್ನ ಉಸಿರಿರುವವರೆಗೂ ನ್ಯಾಯಕ್ಕಾಗಿ ಹೋರಾಟ ನಡಸುತ್ತೇನೆ ಎಂದು ತೆಲುಗಿನ ಖ್ಯಾತ ನಟ ನರೇಶ್ ಪತ್ನಿ ರಮ್ಯಾ ರಘುಪತಿ ಹೇಳಿದರು.

Exit mobile version