Site icon PowerTV

ಸಖತ್ ಸ್ಟೆಪ್ ಹಾಕಿದ ಶಾಸಕ ಪ್ರೀತಂಗೌಡ

ಹಾಸನ : ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಕಾರ್ಯಕ್ರಮವೊಂದರಲ್ಲಿ ಕಾರ್ತಕರ್ತರೊಂದಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಹಾಸನ ನಗರದ ಮಲೆನಾಡು ಕಾಲೇಜು ಆವರಣದಲ್ಲಿ ಶಾಸಕ ಪ್ರೀತಂಗೌಡ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಗೌರವಧನ ನೀಡುವ ಕಾರ್ಯಕ್ರಮದಲ್ಲಿ ಪ್ರೀತಂಗೌಡ ಡ್ಯಾನ್ಸ್ ಮಾಡಿದ್ದಾರೆ.

ಸನ್ಮಾನ ಹಾಗೂ ಗೌರವ ಧನ ಕಾರ್ಯಕ್ರಮದಲ್ಲಿ ಗಾಯಕ ಸಂಚಿತ್ ಹೆಗ್ಡೆ ಅವರಿಂದ ಮನರಂಜನೆಗಾಗಿ ಗಾಯನ ಕಾರ್ಯಕ್ರಮ ಕೂಡಾ ಆಯೋಜನೆ‌ ಮಾಡಲಾಗಿತ್ತು. ಸಂಗೀತ ಕಾರ್ಯಕ್ರಮ ಮುಗಿದ ನಂತೆ ಕೊನೆಯಲ್ಲಿ ಶಾಸಕರು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಟಗರು ಬಂತು ಟಗರು ಹಾಡಿಗೆ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ಅಭಿಮಾನಿಗಳ ಒತ್ತಾಯದ ಮೇರೆಗೆ ಭರ್ಜರಿ ಡ್ಯಾನ್ಸ್ ಮಾಡಿರೋ ಶಾಸಕರು ಡ್ಯಾನ್ಸ್ ಮಾಡಿದರು.

Exit mobile version