Site icon PowerTV

‘ಮೋದಿ ಸರ್ಕಾರವನ್ನು ಕೆಳಗಿಳಿಸುತ್ತೇವೆ’ : ತೆಲಂಗಾಣ ಸಿಎಂ

ತೆಲಂಗಾಣ : ಚುನಾವಣೆಗೂ ಮುನ್ನ ಸುಳ್ಳಿನ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಯೋಜನಕ್ಕೆ ಬಾರದ ಮಾತುಗಳನ್ನಾಡುತ್ತಿದ್ದಾರೆ ಎಂದು ಟಿಆರ್ ಎಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿರುವ ಮೋದಿ ಸರ್ಕಾರವನ್ನು ಕೇಂದ್ರದಿಂದ ಕೆಳಗಿಳಿಸಲಾಗುವುದು ಎಂದು ಚಂದ್ರಶೇಖರ್ ರಾವ್ ಬಿಜೆಪಿಗೆ ಬೆದರಿಕೆ ಹಾಕಿದರು. ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಪರಿಚಯಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಶೇಖರ್ ರಾವ್, ಅನೇಕ ಕೇಂದ್ರ ಸಚಿವರು ಪ್ರಸ್ತುತ ಹೈದರಾಬಾದಿನಲ್ಲಿದ್ದು, ಮಹಾರಾಷ್ಟ್ರದಲ್ಲಿ ಆದಂತೆ ತೆಲಂಗಾಣದಲ್ಲೂ ಸರ್ಕಾರ ಕೆಡವಲು ನಿರ್ಧರಿಸಿದ್ದಾರೆ. ಅದು ಓಕೆ. ಅದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಆದ್ದರಿಂದ ನಾವು ಮುಕ್ತವಾಗಿದ್ದೇವೆ. ತದನಂತರ ದೆಹಲಿಯಲ್ಲಿ ನಾವು ಮೋದಿ ಸರ್ಕಾರವನ್ನು ಕೆಳಗಿಳಿಸುತ್ತೇವೆ ಎಂದು ಹೇಳಿದರು.

Exit mobile version