Site icon PowerTV

ನಾನು ಬಿಜೆಪಿಯವರನ್ನು ಕರೆದಿಲ್ಲ : ಸಿದ್ದರಾಮಯ್ಯ

ಬೆಂಗಳೂರು : ನಾನು ಯಾವತ್ತು ಜನ್ಮ ದಿನಾಚರಣೆ ಯಾವತ್ತು ಮಾಡಿಕೊಂಡಿಲ್ಲ. ನನ್ನ ಡೇಟ್ ಆಫ್ ಬರ್ತ್ ಸರಿಯಾಗಿ ಗೊತ್ರಿಲ್ಲಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಡೇಟ್ ಆಫ್ ಬರ್ತ್ ಸರಿಯಾಗಿ ಗೊತ್ರಿಲ್ಲ. ಅಂದಾಜಿನ ಪ್ರಕಾರ ದಾಖಲಿಸಲಾಗಿದೆ. ನನ್ನ ಜನ್ಮ ದಿನಾಚರಣೆ ಬಗ್ಗೆ ಮಾತಾಡೋರು ಹಾಗಾದರೆ ಯಡಿಯೂರಪ್ಪ ಆಚರಿಸಿಕೊಂಡ್ರಲ್ಲ ಅದಕ್ಕೆ ಏನು ಅಂತಾರೆ. ಸ್ಕೂಲ್ ರೆಕಾರ್ಡ್ ಪ್ರಕಾರ ಆಗಸ್ಟ್ ೩ ಕ್ಕೆ ನನಗೆ ೭೫ ವರ್ಷ ತುಂಬುತ್ತೆ. ಅದೂ ಗೊತ್ತಿರಲಿಲ್ಲ ನನಗೆ ಮೊನ್ನೆ ಊರಿಗೆ ಹೋದಾಗ ಗೊತ್ರಾಯ್ತು ಎಂದರು.

ಇನ್ನು, ನಾನು ಬೇರೆ ಡೇಟ್ ಅನ್ಕೊಂಡಿದ್ದೆ ೧೨ ನೇ ತಾರಿಕು ಮಾಡ್ಕೋತಿದ್ದೆ. ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗವಹಿಸ್ತಾರೆ. ನಾನು ಬಿಜೆಪಿಯವರನ್ನ ಯಾರನ್ನೂ ಕರೆದಿಲ್ಲ. ದೇಶಪಾಂಡೆ ನೇತೃತ್ವದ ಸಮಿತಿ ಇದೆ ಅವರು ಯಾರನ್ನ ಕರಿತಾರೆ ಅವರು ಬರ್ತಾರೆ. ೩-೮-೨೦೨೨ ಕ್ಕೆ ನನಗೆ ೭೫ ವರ್ಷ ತುಂಬುತ್ತೆ. ಅದನ್ನ ನನ್ನ ಬೆಂಬಲಿಗರು ಸ್ನೇಹಿತರು ಆಚರಿಸುತ್ತಿದ್ದಾರೆ. ಅದಕ್ಕೆ ಅಮೃತ ಮಹೋತ್ಸವ ಅಂತ ಕರೆಯುತ್ತಾರೆ. ೭೫ ವರ್ಷ ಒಂದು ಮೈಲ್ ಸ್ಟೋನ್. ನನ್ನ ಆತ್ಮಿಯರು ಹೀಗೆ ಮಾಡೋಣ ಅಂದರು, ನಾನು ಒಪ್ಪಿಕೊಂಡಿದ್ದೇನೆ. ಅದು ಸಿದ್ದರಾಮೋತ್ಸವನೂ ಅಲ್ಲಾ ಸಿದ್ದರಾಮೇಶ್ವನ ಉತ್ಸವನೂ ಅಲ್ಲಾ‌ ಎಂದು ಹೇಳಿದರು.

Exit mobile version