Site icon PowerTV

ಮೋದಿಯ ‘ಎಂಟು ವರ್ಷ ನೂರೆಂಟು ಸಂಕಷ್ಟ’ : ಪುಸ್ತಕ ಬಿಡುಗಡೆ

ಬೆಂಗಳೂರು: ಇಂದು ಮೋದಿ ಸರಕಾರ ಎಂಟು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಏರ್ಪಡಿಸಿ, ಅಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಅಲ್ಲದೇ ಮೋದಿ ಎಂಟು ವರ್ಷಗಳಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ ಎಂದು ಹೇಳಿದರು.

‘ಎಂಟು ವರ್ಷ ನೂರೆಂಟು ಸಂಕಷ್ಟ’ಅನ್ನುವ ಶೀರ್ಷಿಕೆ ಇರುವ ಪುಸ್ತಕ ಇದಾಗಿದ್ದು, ನೋಟ್ ಬ್ಯಾನ್ ಮತ್ತು ರೈತ ವಿರೋಧಿ ಕಾನೂನು, GST ಹಣ ನೀಡುವಲ್ಲಿ ವಿಳಂಬ, ಕಪ್ಪು ಹಣ ತರುವಲ್ಲಿ ಕೂಡ ವಿಫಲವಾಗಿದೆ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಸಾಲದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ, ಸೇರಿದಂತೆ ಸರ್ಕಾರದ ಹಲವು ಗೊಂದಲ, ನಿರ್ಧಾರಗಳ ಬಗ್ಗೆ ಸಿದ್ದರಾಮಯ್ಯ ಅವರು ಪುಸ್ತಕದಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Exit mobile version