Site icon PowerTV

ತಿಪಟೂರು ಜಿಲ್ಲಾಕೇಂದ್ರಕ್ಕಾಗಿ ಹೋರಾಟ

ತುಮಕೂರು : ಮಧುಗಿರಿ ಹಾಗೂ ತಿಪಟೂರು ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಲೇ ಇದೆ. ಅದೇ ನಿಟ್ಟಿನಲ್ಲಿ ಇಂದು ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ತಿಪಟೂರು ಜಿಲ್ಲಾ ಕೇಂದ್ರವಾಗಿಸಬೇಕೆಂದು ಬೈಕ್ ರ್ಯಾಲಿ ನಡೆಸಲಾಯಿತು.

ಈ ವೇಳೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬೈಕ್ ಸವಾರರು ರ್ಯಾಲಿಯಲ್ಲಿ ಭಾಗವಹಿಸಿ ಜಿಲ್ಲಾ ಕೇಂದ್ರಕ್ಕಾಗಿ ಒತ್ತಾಯಿಸಿದ್ರು ಈ ವೇಳೆ ರ್ಯಾಲಿ ಮುಂದಾಳತ್ವ ವಹಿಸಿದ್ದ ಕೆ.ಟಿ.ಶಾಂತಕುಮಾರ್ ಮಾತನಾಡಿ ತುಮಕೂರು ನಗರ ತಿಪಟೂರಿಗಿಂತ ನೂರು ಕಿಮೀ ದೂರದಲ್ಲಿದ್ದು ರೈತರಿಗೆ ಹಾಗೂ ಸಾರ್ವಜನಿಕರ ಯಾವುದೇ ಜಿಲ್ಲಾ ಕೇಂದ್ರದ ಕೆಲಸಗಳು ಆಗುತ್ತಿಲ್ಲ, ಈಗಾಗಲೇ ತಿಪಟೂರಿನಲ್ಲಿ ಜಿಲ್ಲಾ ಕೇಂದ್ರಕ್ಕೆ ಬೇಕಾದ ಎಲ್ಲಾ ಅನುಕೂಲಗಳಿವೆ ಆಗಾಗಿ ತಿಪಟೂರು ಜಿಲ್ಲಾ ಕೇಂದ್ರವಾಗಿಸುವಂತೆ ಒತ್ತಾಯಿಸಿದ್ದಾರೆ.

Exit mobile version