Site icon PowerTV

ರಸ್ತೆ ಅಪಘಾತ : ಪತ್ರಿಕಾ ವಿತರಕ ಸ್ಥಳದಲ್ಲೇ ಸಾವು

ಶಿವಮೊಗ್ಗದ : ಪತ್ರಿಕಾ ವಿತಕರನ ಸೈಕಲ್​​ಗೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಾಗರ ತಾಲೂಕಿನ ಪ್ರವಾಸಿ ಮಂದಿರದ ಬಳಿ ನಡೆದಿದೆ.

ಬೆಳಲಮಕ್ಕಿಯ ಗಣೇಶ್ (25) ಮೃತಪಟ್ಟ ಪತ್ರಿಕಾ ವಿತರಕ. ಇಂದು ಮುಂಜಾನೆ ವೇಳೆಗೆ ನಡೆದಿರುವ ಪ್ರಕರಣವಾಗಿದೆ.

ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರಕ್ಕೆ ಹೋಗುತ್ತಿದ್ದ KSRTC ಬಸ್​​ ಹಾಗೂ ಪತ್ರಿಕೆ ವಿತರಣೆಗೆ ಹೊರಟಿದ್ದ ಸೈಕಲ್​​ಗೆ ಡಿಕ್ಕಿ ಹೊಡೆದಿದೆ.

ಇನ್ನು ಸೈಕಲ್ ಹಿಂಬದಿ ಸವಾರ ರಾಹುಲ್​​ಗೆ ಸಣ್ಣಪುಟ್ಟ ಗಾಯಗಳಾಗಿದೆ.

Exit mobile version