Site icon PowerTV

ಅಪ್ಪಂಗೆ ಬಾದಾಮಿ ಕ್ಷೇತ್ರದಲ್ಲೇ ಸ್ಪರ್ಧಿಸಲು ಹೇಳುವೆ : ಡಾ.ಯತೀಂದ್ರ ಸಿದ್ದರಾಮಯ್ಯ

ಬಾದಾಮಿ: ತಂದೆಯವರಿಗೆ ಕಷ್ಟವಾದರೂ ಬಾದಾಮಿಯಲ್ಲಿಯೇ ಸ್ಪರ್ಧಿಸಲು ಹೇಳುವೆ ಎಂದು ವರುಣಾ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಹೇಳಿದರು.

ಮುಖಂಡರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಇಲ್ಲಿಂದಲೇ ಸ್ಪರ್ಧಿಸಲಿ’ ಎಂದು ಮುಖಂಡ ಎಂ.ಬಿ. ಹಂಗರಗಿ, ಹೊಳೆಬಸು ಶೆಟ್ಟರ್‌ ಒತ್ತಾಯಿಸಿದರು ಎಂದು ಹೇಳಿದರು.

ಅಲ್ಲದೇ ತಂದೆಯವರಿಗೆ ಬಾದಾಮಿ ಕ್ಷೇತ್ರ ದೂರವಾಗುತ್ತದೆ. ಸಾರ್ವಜನಿಕರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಾದಾಮಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದು ಕಷ್ಟ’ ಎಂದು ತಿಳಿಸಿದರು.

ಇನ್ನು ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಈ ಕ್ಷೇತ್ರದಲ್ಲಿ ಜನರು ಆಯ್ಕೆ ಮಾಡಿ ಕಳಿಸಿದ್ದಾರೆ. ನಿಮ್ಮ ಋಣ ನಮ್ಮ ಕುಟುಂಬದ ಮೇಲಿದೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ ಎಂದು ಡಾ. ಯತೀಂದ್ರ ಅವರು ತಿಳಿಸಿದರು.

Exit mobile version