Site icon PowerTV

ನಮ್ಮ ಸಿಎಂ ಹೆಚ್ಡಿಕೆ ಈ ತರ ಹೇಳುವ ತಾಕತ್​ 2 ಪಕ್ಷಗಳಿವೆ ಇದೆಯಾ?: ಇಬ್ರಾಹಿಂ

ಬೆಂಗಳೂರು : ನಮ್ಮ ಸಿಎಂ ಹೆಚ್ ಡಿ ಕುಮಾರಸ್ವಾಮಿ. ಬಿಜೆಪಿ, ಕಾಂಗ್ರೆಸ್​​ಗೆ ಇದನ್ನ ಹೇಳೋ ತಾಕತ್ ಇದ್ಯಾ. ಕಾಂಗ್ರೆಸ್ ಗೆ 110 ಕಡೆ ಅಭ್ಯರ್ಥಿ ಇಲ್ಲ ಅಂತಾ ಒಪ್ಪಿಕೊಂಡಿದ್ದಾರೆ. ನಮ್ಮದು ಒಕ್ಕಲುತನ ಮಾಡೋ ಪಾರ್ಟಿ, ಬಡವರ ಪಾರ್ಟಿ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನು ಏರ್ಪಡಿಸಿ ಮಾತನಾಡಿದ ಅವರು, ಜನತಾ ದಳ ಅಸ್ತಿತ್ವದಲ್ಲಿ ಇಲ್ಲ ಅಂತೀರಿ. ಹಾಗಾದ್ರೆ ನಮ್ಮ ಮೇಲೆ ಭಯ ಯಾಕೆ. ನಾನು ರಿಯಾಕ್ಷನ್ ಮಾಡಿದ್ದಲ್ಲ, ಕೆಪಿಸಿಸಿ ಅಧ್ಯಕ್ಚರು, ಎಐಸಿಸಿ ವೇಣುಗೋಪಾಲ್ ಏನ್ ಹೇಳಿದ್ದಾರೆ. ನಿಮಗೆ ನಾಲಗೆ ಇದೆ, ಹತಾಶೆಯಿಂದ ಮಾತಾಡ್ತಿದ್ದೀರಿ. ಬಿಜೆಪಿಯ ಬಿ ಟೀಂ ಆಗಿ ಕೆಲಸ ಮಾಡ್ತಿರೋದು ನೀವು, ಮೈಸೂರು ಬಿಜೆಪಿ ಮೇಯರ್, ಉಪ‌ ಉಪಮೇಯರ್ ಕಾಂಗ್ರೆಸ್ ಇಲ್ವೇ ಎಂದರು.

Exit mobile version