Site icon PowerTV

ಅಕ್ರಮ ಹಣ ವರ್ಗಾವಣೆ ಕೇಸ್​: ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ದೆಹಲಿ: ವಿಧಾನಸಭೆ ಚುನಾವಣೆ ತಯಾರಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ED ಮತ್ತೆ ಕಂಟಕವಾಗುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದ್ರೆ ಜಾರಿ ನಿರ್ದೇಶನಾಲಯ ಜುಲೈ 30ಕ್ಕೆ ವಿಚಾರಣೆ ಮುಂದೂಡಿದ್ದು,ಡಿಕೆಶಿಗೆ ಕೊಂಚ ರಿಲೀಫ್​ ಸಿಕ್ಕಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರು ದೆಹಲಿಯಲ್ಲಿರುವ ED ವಿಶೇಷ ನ್ಯಾಯಾಲಯ ಮುಂದೆ ಹಾಜರಾಗಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಚಾರ್ಜ್‌ಶೀಟ್‌ ಹಿನ್ನಲೆ ಡಿ.ಕೆ.ಶಿವಕುಮಾರ್ ಸೇರಿ ಐದು ಮಂದಿ ಆರೋಪಿಗಳಿಗೆ ಕೋರ್ಟ್ ಸಮನ್ಸ್ ನೀಡಿತ್ತು.

ಸಮನ್ಸ್ ಹಿನ್ನೆಲೆ ಇಂದು ಡಿ.ಕೆ.ಶಿವಕುಮಾರ್ ವಿಚಾರಣೆ ಹಾಜರಾಗಿದ್ದರು. ಮೊದಲ ದಿನದ ವಿಚಾರಣೆಯಾಗಿರುವ ಹಿನ್ನೆಲೆ ಹೈಕೋರ್ಟ್‌ನಿಂದ ಈ ಹಿಂದೆ ಪಡೆದ ಜಾಮೀನು ಪರಿಶೀಲನೆ ನಡೆಯಬೇಕಿತ್ತು. ಆದರೆ ಜಾರಿ ನಿರ್ದೇಶನಾಲಯ ಜುಲೈ 30ಕ್ಕೆ ವಿಚಾರಣೆ ಮುಂದೂಡಿದ್ದು,ಡಿಕೆಶಿಗೆ ಕೊಂಚ ರಿಲೀಫ್​ ಸಿಕ್ಕಿದೆ. ಈವರೆಗೂ ED ಸಲ್ಲಿಸಿದ ಚಾರ್ಜ್‌ಶೀಟ್‌ ಲಭ್ಯವಾಗದ ಹಿನ್ನೆಲೆ ವಿಚಾರಣೆ ಮುಂದೂಡಲು ಡಿಕೆಶಿ ಪರ ವಕೀಲರು ಮನವಿ ಮಾಡುವ ಸಾಧ್ಯತೆಯಿದೆ.

Exit mobile version