Site icon PowerTV

ಸಿಲಿಂಡರ್ ಬೆಲೆ ಇಳಿಕೆ; ಇಂದಿನಿಂದಲೇ ಹೊಸ ದರ ಜಾರಿ

ದೆಹಲಿ : ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 198 ರೂಪಾಯಿ ಕಡಿಮೆ ಮಾಡಲಾಗಿದೆ.

ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2,021 ರೂ. ಆಗಿದೆ. ಈ ಮುನ್ನ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 2,219 ರೂ. ಆಗಿತ್ತು. ಇದಕ್ಕೂ ಮುನ್ನ ಜೂನ್‍ನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 135 ರೂಪಾಯಿ ಇಳಿಕೆಯಾಗಿತ್ತು.

ಕೋಲ್ಕತ್ತಾದಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 182 ರೂಪಾಯಿ ಇಳಿಕೆಯಾಗಿದೆ. ಮತ್ತೊಂದೆಡೆ ಮುಂಬೈನಲ್ಲಿ 190 ರೂಪಾಯಿ 50 ಪೈಸೆ ಮತ್ತು ಚೆನ್ನೈನಲ್ಲಿ 187 ರೂಪಾಯಿ ಇಳಿಕೆಯಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ಸಹ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಕಡಿಮೆಯಾದರೆ ರೆಸ್ಟೋರೆಂಟ್, ತಿನಿಸು ತಯಾರಿಕೆ ಕೇಂದ್ರಗಳು, ಟೀ ಸ್ಟಾಲ್ ಗಳು ಮತ್ತು ಇತರ ವಾಣಿಜ್ಯ ತಿನಿಸು ಮಾರಾಟ ಮಾಡುವ ಕೇಂದ್ರಗಳಿಗೆ ಖರ್ಚುವೆಚ್ಚಗಳು ಕೊಂಚ ಇಳಿಕೆಯಾಗಬಹುದು.

 

Exit mobile version