Site icon PowerTV

ಪುಟಿನ್ ವಿರುದ್ಧ ಬ್ರಿಟನ್ ಪ್ರಧಾನಿ ಬೋರಿಸ್ ಕಿಡಿ

ರಷ್ಯಾ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹಿಳೆಯಾಗಿದ್ದರೆ, ಉಕ್ರೇನ್ ಮೇಲೆ ಯುದ್ಧವನ್ನು ಘೊಷಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.

ಜರ್ಮನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಾನ್ಸನ್, ಪುಟಿನ್‌ಗೆ ಒಬ್ಬ ಮಹಿಳೆಗೆ ಇರುವ ಮನಸ್ಥಿತಿ ಖಂಡಿತವಾಗಿಯೂ ಇಲ್ಲ. ಒಂದು ವೇಳೆ ಆತ ಮಹಿಳೆಯಾಗಿದ್ದರೆ, ಖಂಡಿತವಾಗಿಯೂ ಈ ರೀತಿ ಆಕ್ರಮಣ, ಹಿಂಸಾಚಾರದ ಹುಚ್ಚುತನವನ್ನು ಪ್ರದರ್ಶಿಸುತ್ತಿರಲಿಲ್ಲ ಎಂದು ಹೇಳಿದರು.

ಉಕ್ರೇನ್ ಮೇಲೆ ಪುಟಿನ್ ಅವರ ಆಕ್ರಮಣ ವಿಷಕಾರಿ ಪುರುಷತ್ವದ ನಡವಳಿಕೆಯ ಪರಿಪೂರ್ಣ ಉದಾಹರಣೆಯಾಗಿದೆ. ಇದೇ ವೇಳೆ ಪ್ರಪಂಚದಾದ್ಯಂತ ಮಹಿಳೆಯರಿಗೆ ಅಧಿಕಾರಗಳಲ್ಲಿ ಉತ್ತಮ ಸ್ಥಾನಗಳನ್ನು ನೀಡುವಂತೆ ಬೋರಿಸ್ ಜಾನ್ಸನ್ ಕರೆ ನೀಡಿದರು. ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಉಕ್ರೇನ್ ಅನ್ನು ಬೆಂಬಲಿಸಬೇಕು. ಮಾಸ್ಕೊದೊಂದಿಗೆ ಶಾಂತಿಯುತ ಮಾತುಕತೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

Exit mobile version