Site icon PowerTV

ಪೌರ ಕಾರ್ಮಿಕರನ್ನ ಖಾಯಂ ಮಾಡುವ ಬೇಡಿಕೆ ಮೊದಲಿನಿಂದ ಇದೆ : ಹರೀಶ್

ಬೆಂಗಳೂರು : ಪೌರ ಕಾರ್ಮಿಕರನ್ನ ಖಾಯಂ ಮಾಡುವ ಬಗ್ಗೆ ಮೊದಲಿನಿಂದಲೂ ಬೇಡಿಕೆ ಇದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಹೇಳಿದ್ದಾರೆ.

ಬಿಬಿಎಂಪಿ ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ಮಾತನಾಡಿದ ಅವರು, ಪೌರ ಕಾರ್ಮಿಕರನ್ನ ಪರ್ಮನೆಂಟ್ ಮಾಡುವ ಬಗ್ಗೆ ಮೊದಲಿನಿಂದಲೂ ಬೇಡಿಕೆ ಇದೆ. 4 ಸಾವಿರ ಪೌರ ಕಾರ್ಮಿಕರನ್ನ ಪರ್ಮನೆಂಟ್ ಮಾಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಈ ಸಂಬಂಧ ಸರ್ಕಾರವೇ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳಲಿದೆ. ಪಾಲಿಕೆಯಲ್ಲಿನ ಪೌರ ಕಾರ್ಮಿಕರನ್ನ ಖಾಯಂ‌ ಮಾಡಲು ಪತ್ರ ನೀಡಿದ್ರು ಎಂದರು.

ಅದಲ್ಲದೇ, ಸರ್ಕಾರ ಈ ಸಂಬಂಧ ಸಭೆ ನಡೆಸಲಿದೆ. ಪಾಲಿಕೆಯಿಂದ‌ ಪೌರಕಾರ್ಮಿಕರಿಗಾಗಿ ಹಲವು ಸೌಲಭ್ಯ ನೀಡಲಾಗಿದ್ದು, ಪೌರ ಕಾರ್ಮಿಕರಿಗೆ 5 ತಾರಿಕಿನ ಒಳಗೆ ಸಂಬಳ ನೀಡ್ತಿದ್ದೇವೆ. ಇಎಸ್ಐ ಪಿಎಫ್ ಸೌಲಭ್ಯ ನೀಡ್ತಿದ್ದೇವೆ. ಹೆರಿಗೆ ರಜೆ ನೀಡ್ತಿದ್ದೇವೆ. ಗುತ್ತಿಗೆದಾರರ ಬದಲಾಗಿ ಪಾಲಿಕೆಯೇ ನೇರ ಸಂಬಳ ನೀಡ್ತಾಯಿದೆ. ನಿವೃತ್ತ ನೌಕರರ ಹೆಸರಲ್ಲಿ 10 ಲಕ್ಷ ಠೇವಣಿ ನೀಡ್ತಿದ್ದೇವೆ. ಅದರ ಬಡ್ಡಿ ಹಣವನ್ನ ಜೀವಿತಾವಧಿವರೆಗೂ ಪೌರ ಕಾರ್ಮಿಕರಿಗೆ ನೀಡಲಾಗುತ್ತದೆ ಎಂದು ಹೇಳಿದರು.

ಇನ್ನು, ಅಂಬೇಡ್ಕರ್ ಜಯಂತಿಯಂದು 7 ಸಾವಿರ ಬೋನಸ್ ನೀಡಿದ್ದೇವೆ. ಪೌರ ಕಾರ್ಮಿಕರಿಗೆ ಸಂಕಷ್ಟ ನಿಧಿ ಯೋಜನೆ ಅಡಿ 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ಆರು ತಿಂಗಳಿಗೊಮ್ಮೆ ಏಳುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ ವಿತರಣೆ ಮಾಡಲಾಯಿತು. ಹೆಲ್ತ್ ಕಾರ್ಡ್ – ಇಎಸ್ಐ ಹಾಸ್ಪಿಟಲ್ ಹಾಗೂ ಅರೋಗ್ಯ ಸುರಕ್ಷತಾ ಕಾರ್ಡ್ ಮಾಡಿಸಿದ್ದೇವೆ ಎಂದರು.

Exit mobile version