Site icon PowerTV

3 ವರ್ಷದ ಮಗು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಬೆಂಗಳೂರು : 3 ವರ್ಷದ ಮಗು ಕೊಂದು ಆತ್ಮಹತ್ಯೆಗೆ ತಾಯಿ ಶರಣಾದ ಘಟನೆ ಆರ್.ಆರ್.ನಗರದ ಮಂತ್ರಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

3.5 ವರ್ಷದ ಮಗಳು ರಿಯಾ, 31 ವರ್ಷದ ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ದೀಪಾ ಅನಾರೋಗ್ಯ ಹಿನ್ನೆಲೆ ಮಗಳನ್ನು ಕೊಂದು ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು, ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ದೀಪಾ. ನನ್ನ ಸಾವಿಗೆ ಯಾರು ಕಾರಣರಲ್ಲ, ಕ್ಷಮಿಸಿ ಎಂದು ಡೆತ್‌ನೋಟ್​​ನಲ್ಲಿ ಬರೆದಿದ್ದಾರೆ. ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version