Site icon PowerTV

ಯಾರಿಗೂ ಟೈಮ್​ ಬಾಂಬ್​ ಕೊಟ್ಟಿಲ್ಲ : ಸಂಗನಬಸವ ಸ್ವಾಮೀಜಿ

ಬಾಗಲಕೋಟೆ : ಸರ್ಕಾರದ ಮೇಲೆ ನಮಗೆ ಭರವಸೆ ಇದೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಟ್ಟೇ ಕೊಡ್ತಾರೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ.

ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿದ ಅವರು, 2ಎ ಮೀಸಲಾತಿ ಹೋರಾಟ ಕೂಡಲಸಂಗಮ ಸ್ವಾಮೀಜಿಗೆ ಅಷ್ಟೇ ಸೀಮಿತ ಅಲ್ಲ. ಹರಿಹರ ಪೀಠ, ಆಲಗೂರ ಪೀಠ ಹಾಗೂ ಒಕ್ಕೂಟದ ಎಲ್ಲ ಮಠಾಧೀಶರು ಬೆಂಬಲ ನೀಡಿದ್ದೇವೆ. ಹೋರಾಟದ ಪಾದಯಾತ್ರೆ ಯಲ್ಲಿ ನಾವೆಲ್ಲ ಸ್ವಾಮೀಜಿಗಳು ಭಾಗಿಯಾಗಿದ್ದೇವೆ ಎಂದರು.

ಇನ್ನು, ಒಕ್ಕೂಟದ ಮಠಾಧೀಶರು, ಹರಿಹರ ಪೀಠದ ಸ್ವಾಮೀಜಿಗಳು ಕೂಡಿಕೊಂಡು ಮೂರು ಸಲ ಆಯೋಗಕ್ಕೆ ಭೇಟಿ ನೀಡಿದ್ದೇವೆ. ನಾವು ನಮ್ಮ ಪಂಚಮಸಾಲಿ ಸಮಾಜಕ್ಕೆ ಒಂದೇ ಕೊಡಿ ಅಂತ ಕೇಳಿಲ್ಲ ಇತರೆ ಸಮಾಜದವರು ನಮ್ಮ ಸಮಾಜದ ಜೊತೆ ಒಡನಾಡಿಗಳಿದ್ದಾರೆ ಅವರಿಗೂ ಸವಲತ್ತು ಕೊಡ್ರಿ ಅಂತ ಹೇಳಿದ್ದೇವೆ. ಒಂದು ವಾರದ ಹಿಂದೆ ಆಯೋಗಕ್ಕೆ ಹೋಗಿ ನಮ್ಮ ಎಲ್ಲ ಸ್ವಾಮೀಜಿಗಳು ಭೇಟಿಯಾಗಿದ್ದರೆ. ಕಾಲಾವಕಾಶ ಕೊಡಿ, ಸಮಾಜ ದೊಡ್ಡದಿದೆ ಮಾಡ್ತೇನೆ ಅನ್ನೋ ಭರವಸೆ ಸಿಎಂ ಕೊಟ್ಟಿದ್ದಾರೆ. ಹೋರಾಟದ ಸಮಯದಲ್ಲಿ ಸಿಎಂ ಬೊಮ್ಮಾಯಿ ಮಂತ್ರಿ ಇದ್ರು ಅವಾಗ ಭರವಸೆ ಕೊಟ್ಟಿದ್ರು. ಈಗ ಸಿಎಂ ಆಗಿದ್ದಾರೆ ಮಾಡ್ತಾರೆ ಅನ್ನೋ ಭರವಸೆ ಇದೆ. ನಾವು ಯಾರಿಗೂ ಟೈ ಬಾಂಬ್​ ಕೊಟ್ಟಿಲ್ಲ ಎಂದು ಹೇಳಿದರು.

Exit mobile version