Site icon PowerTV

ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿದ ಕರಡಿಗಳ ಹಾವಳಿ

ಕೊಪ್ಪಳ : ಕರಡಿಗಳ ಹಾವಳಿಗೆ ಕೊಪ್ಪಳ ತಾಲೂಕಿನ ಮುಸಲಾಪೂರ, ಗಂಗನಾಳ, ಸುಳಿಕೇರಿ, ಚಳ್ಳಾರಿ, ಹಾಸಗಲ್ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕರಡಿ ಪ್ರತ್ಯಕ್ಷವಾಗಿ ಜಮೀನಿನಲ್ಲಿರೋ‌ ಮನೆಯ ಮಾಳಿಗೆ ಏರಿದೆ. ಕರಡಿಯನ್ನು ಓಡಿಸಲು ಜನರು ಬೆನ್ನು ಹತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಗ್ರಾಮದಲ್ಲೇ ಬೀಡು ಬಿಟ್ಟಿರುವ ಕರಡಿಗಳು ರೈತರು ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ನಾಶ ಮಾಡುತ್ತಿವೆ. ಕರಡಿ ಹಿಡಿಯಲು ಮನವಿ ಮಾಡಿದ್ರೂ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾರೇ ಅನ್ನುತ್ತಿಲ್ಲ.

ಕರಡಿಗಳ ಹಾವಳಿ ಇಂದ ಐದಾರು ಗ್ರಾಮಗಳ ಜನರು ಆತಂಕದಲ್ಲಿ ಬದುಕುವಂತಾಗಿದೆ. ಕೂಡಲೇ ಕರಡಿಗಳನ್ನ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯುಸಿದ್ದಾರೆ. ಗ್ರಾಮದೊಳಗೆ ಕರಡಿಗಳು ನುಗ್ಗಿರೋದು ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ.

Exit mobile version