Site icon PowerTV

1000 ಒಳಗಿನ ಹೋಟೆಲ್‌ಗಳಿಗೆ ಇನ್ನು ಮುಂದೆ ಜಿಎಸ್‌ಟಿ

ಬೆಂಗಳೂರು : ಮಂಗಳವಾರ ಹಾಗೂ ಬುಧವಾರ ಕೇಂದ್ರ ಸರ್ಕಾರದ ಮುಖ್ಯಸ್ಥರು ಮತ್ತು ಅಧಿಕಾರಿಗಳು ಜಿಎಸ್ ಟಿ ಕೌನ್ಸಿಲ್ ಸಭೆ ನಡೆಸಿದ್ರು. ಸದ್ಯ ಸಭೆಯಲ್ಲಿ ನಡೆಸಿದ ನಿರ್ಧಾರಗಳಿಂದ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ರಾಜ್ಯದ ಸಣ್ಣ, ಮಧ್ಯಮ ಹೋಟಲ್ ಮಾಲೀಕರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ .

ಇಷ್ಟು ದಿನ 1000 ರೂ.ವರೆಗಿನ ಹೋಟೆಲ್ ಕೊಠಡಿಗಳನ್ನು ಬಾಡಿಗೆಗೆ ಪಡೆದರೆ ಅವರು GST ವ್ಯಾಪ್ತಿಗೆ ಬರುತ್ತಿರಲಿಲ್ಲ. 1000 ರೂ. ಗಿಂತಲೂ ಅಧಿಕ ವೆಚ್ಚದ ಕೊಠಡಿಯನ್ನು ಬಾಡಿಗೆ ಮಾಡಿದರೆ ಮಾತ್ರ ಹೆಚ್ಚುವರಿಯಾಗಿ ನೂರಕ್ಕೆ ಶೇ.12%ರಂತೆ GST ತೆರಿಗೆ ಕಟ್ಟಬೇಕಿತ್ತು. ಇದೀಗ ಈ ನಿಯಮವನ್ನು 1000 ರೂ. ಒಳಗಿನ ಕೊಠಡಿ ಬಾಡಿಗೆಗಳಿಗೂ ಅನ್ವಯಿಸುವಂತೆ ಶೇ.12%ರಷ್ಟು GST ವಿಧಿಸಿದೆ. ಇದಕ್ಕೆ ಹೋಟೆಲ್ ಮಾಲೀಕರು ವಿರೋಧ ಹೊರಹಾಕಿದ್ದಾರೆ.

ಇನ್ನು ಇತ್ತ ಮತ್ತೊಂದು ಕಡೆ 24 ಗಂಟೆ ಹೋಟೆಲ್ ಒಪೆನ್​​ಗೆ ಕೆಲವು ಕಡೆ ಮೌಖಿಕ ಆದೇಶ ನೀಡಿದೆ. ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ಸ್ಟ್ಯಾಂಡ್, ಇಂಡಸ್ಟ್ರಿ ಇರುವ ಕಡೆ ಮಾತ್ರ ಹೋಟೆಲ್ ಪ್ರಾರಂಭಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ.. ಆದರೆ ಇಡೀ ಟೌನ್‍ನಲ್ಲಿ ಹೊಟೇಲ್ ಓಪನ್ ಮಾಡುವ ಬಗ್ಗೆ ಚರ್ಚೆ ಆಗಬೇಕು ಅನ್ನೋ ಮಾಹಿತಿ ಇದೆ. ಆದ್ರೆ ಹೋಟೆಲ್ ಮಲೀಕರು ಮಾತ್ರ ನಮಗೆ ಇನ್ನು ಆದೇಶ ಆಗಿಲ್ಲ. ಮೌಖಿಕವಾಗಿ ತಿಳಿಸಿದ್ರೆ ನಮಗೆ ಪ್ರಯೋಜನ ಇಲ್ಲ ಅಂತಾರೆ. ಒಟ್ಟಿನಲ್ಲಿ ಹೋಟೆಲ್​​ಗಳಿಗೆ ಒಂದು ಗುಡ್ ನ್ಯೂಸ್ ಆದ್ರೆ ಮತ್ತೊಂದು ಆತಂಕದ ನ್ಯೂಸ್ ಆಗಿದೆ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು

Exit mobile version