Site icon PowerTV

ಪರಪುರುಷನ ಜೊತೆ ಓಡಿ ಹೋದ ಹೆಂಡ್ತಿ..!

ಕಲಬುರಗಿ : ನಗರದ ಭೋವಿಗಲ್ಲಿ ನಿವಾಸಿಯಾದ ಲಕ್ಷ್ಮೀಕಾಂತ್ ಮತ್ತು ಅಂಜಲಿ ದಂಪತಿ ಮಕ್ಕಳು. ಮೂವರು ಹೆಣ್ಣುಮಕ್ಕಳು, ಓರ್ವ ಮಗನ ಜೊತೆ ಸುಖವಾಗಿದ್ದರು. ಆದರೆ, ಪತ್ನಿ ಮಾತ್ರ ಪರಪುರುಷನೊಂದಿಗೆ ಚಕ್ಕಂದಾ ಆಡುತ್ತಿದ್ದಳು. ಸಾಕಷ್ಟು ಬಾರಿ ಪತ್ನಿ ಅಂಜಲಿಗೆ ಬುದ್ಧಿವಾದ ಹೇಳಿದ್ದರೂ ಪರಪುರುಷನ ಜೊತೆ ಓಡಿ ಹೋಗಿದ್ದಳು. ಇದರಿಂದ ಸ್ಥಿಮಿತ ಕಳೆದುಕೊಂಡ ಪತಿ, ಮಕ್ಕಳನ್ನು ಆಟೋದಲ್ಲಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ‌.

ಇನ್ನೂ ತಾಯಿ ಓಡಿ ಹೋಗಿದ್ದಕ್ಕೆ ನಾಲ್ವರು ಮಕ್ಕಳು ಅಜ್ಜಿ ಹತ್ತಿರ ಆಶ್ರಯ ಪಡೆದಿದ್ದರು. ಬುಧವಾರ ನಾಲ್ವರು ಮಕ್ಕಳಲ್ಲಿ ಸೋನಿ ಮತ್ತು ಮಯೂರಿಯನ್ನು ತಿಂಡಿ ಕೊಡಿಸ್ತೀನಿ ಬನ್ನಿ ಮಕ್ಕಳೇ ಅಂತಾ ಆಟೋದಲ್ಲಿ ಕರೆದೊಯ್ದ ತಂದೆ ಹೆತ್ತ ಮಕ್ಕಳನ್ನೇ ಮುಗಿಸಿದ್ದಾನೆ. ಮಕ್ಕಳ ಶವವನ್ನು ಸೀಟಿನ ಹಿಂಬದಿ ಹಾಕಿದ್ದಾನೆ. ನಂತರ ಮನೆಗೆ ಬಂದು ಇನ್ನಿಬ್ಬರು ಮಕ್ಕಳನ್ನು ಎಂಬಿ ನಗರ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರಿಗೆ ಶರಣಾಗಿದ್ದಾನೆ.

ಅದೇನೇ ಇರಲಿ ಪತ್ನಿ ಪರಪುರುಷನ ಜೊತೆ ಓಡಿಹೋಗಿದ್ರೆ, ಇತ್ತ ಮಾನಸಿಕನಾಗಿ ನೊಂದಿದ್ದ ತಂದೆ ಮುದ್ದಾದ ಹೆಣ್ಣು ಮಕ್ಕಳಿಬ್ಬರನ್ನು ಕೊಂದು ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

Exit mobile version